by ಪ್ರಾಣೇಶದಾಸರು
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |
ಮಾಧವನೆ ಇಂದಲ್ಲ ಜನುಮ ಜನುಮದಲೀ ಪ
ಮಾತಾ ಪಿತರರ ಆಜೆÕ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||ಈತುಚ್ಛವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ 1
ಹರಿದಿನದಲಿ ಬಿಂದುಉದಕಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ 2
ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ 3
ಉತ್ತಮರ ಪೂಜೆಗೆಜಾಗುಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||ನಿತ್ಯಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ 4
ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನಭಕುತಿಯನ್ನು ಕೊಡಲಿಬೇಡ 5
*******