Showing posts with label ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ankita indiresha ENDAPPIKOMBE RANGAYYANA ENDAPPIKOMBE. Show all posts
Showing posts with label ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ankita indiresha ENDAPPIKOMBE RANGAYYANA ENDAPPIKOMBE. Show all posts

Thursday, 2 December 2021

ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ankita indiresha ENDAPPIKOMBE RANGAYYANA ENDAPPIKOMBE



ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ಪ

ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ ಅ.ಪ.

ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ1

ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ 2

ಪುಟ್ಟ ಪುಟ್ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ 3

ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ 4

ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ5

ತಂದೆ ತಾಯರ ಮುಂದೆ ನಿಂದು ಮಾತಾಡಿದನಂದ ಬಾಲಕನಾದ ಇಂದಿರೇಶನೆ ಬೇಗ 6
***