Showing posts with label ಪಾಲಿಸೋ ಎನ್ನ ನೀ ಘನಕರುಣದಲಿ ಗೋಜಾತಕ ಮುದಿರಾ gurumahipati. Show all posts
Showing posts with label ಪಾಲಿಸೋ ಎನ್ನ ನೀ ಘನಕರುಣದಲಿ ಗೋಜಾತಕ ಮುದಿರಾ gurumahipati. Show all posts

Wednesday, 1 September 2021

ಪಾಲಿಸೋ ಎನ್ನ ನೀ ಘನಕರುಣದಲಿ ಗೋಜಾತಕ ಮುದಿರಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಪಾಲಿಸೋ ಎನ್ನ ನೀ ಘನಕರುಣದಲಿ ಗೋ| ಜಾತಕ ಮುದಿರಾ ಪ 


ಅಚ್ಯುತಾನಂತ ಮಹಿಮ ಸರ್ವಾಧಾರಾ| ಇಚ್ಚಾಪೂರಿತ ಮಾಡುವೆ ಸುರಜನರಾ| ನಿಚ್ಚಟ ಹೃತಯರಿಗೊಲಿವೆ ಸತ್ಪರಾ| ಸಚ್ಚಿದಾನಂದನೆ ಮಾ ಮನೋಹರಾ 1 

ಸುರನದಿ ಪಿತ ವಸುದೇವ ಕುಮಾರಾ| ಸರಸಿಜ ಪಾಣಿ ಗೋವರ್ಧನೋದ್ದಾರಾ| ದುರಿತ ನಿವಾರಾ| ವರ ಚತುರ್ಭುಜ ನರಕಾಸುರ ಹರಾ 2 

ವಿಷ್ಣು ನಾರಾಯಣಾಂಬುಜ ನಯನಾ| ವಾಷ್ರ್ಣೇಯಾ ಪರಮಪಾವನ ಮೂರ್ತಿದೇವಾ| ಜಿಷ್ಣುನಾತನು ಸಂಭವನ ರಥಬೋವಾ| ಕೃಷ್ಣ ಗುರು ಮಹಿಪತಿ ನಂದನ ಜೀವನಾ3

***