Showing posts with label ಒಬ್ಬ ಆಚಾರಿಯಾನೆ purandara vittala suladi ಮಧ್ವಾಚಾರ್ಯ ಸ್ತೋತ್ರ ಸುಳಾದಿ OBBA AACHAARIYAANE MADHWACHARYA STOTRA SULADI. Show all posts
Showing posts with label ಒಬ್ಬ ಆಚಾರಿಯಾನೆ purandara vittala suladi ಮಧ್ವಾಚಾರ್ಯ ಸ್ತೋತ್ರ ಸುಳಾದಿ OBBA AACHAARIYAANE MADHWACHARYA STOTRA SULADI. Show all posts

Sunday, 8 December 2019

ಒಬ್ಬ ಆಚಾರಿಯಾನೆ purandara vittala suladi ಮಧ್ವಾಚಾರ್ಯ ಸ್ತೋತ್ರ ಸುಳಾದಿ OBBA AACHAARIYAANE MADHWACHARYA STOTRA SULADI

Audio by Mrs. Nandini Sripad

ಶ್ರೀ ಪುರಂದರದಾಸಾರ್ಯ ವಿರಚಿತ  ಶ್ರೀ ಮಧ್ವಾಚಾರ್ಯ ಸ್ತೋತ್ರ ಸುಳಾದಿ 

ರಾಗ ಕಲ್ಯಾಣಿ   ಧ್ರುವತಾಳ 

ಒಬ್ಬ ಆಚಾರಿಯಾನೆ ದೈವವೇ ಇಲ್ಲವೆಂಬಾ
ಒಬ್ಬ ಆಚಾರಿಯಾನೆ ದೈವಕೆಂಟೆ ಗುಣವೆಂಬ
ಒಬ್ಬ ಆಚಾರಿಯಾನೆ ನಿರ್ಗುಣ ನಿರಾಕಾರ 
ನಿರ್ಬವಯವೆಂದು ಕಡೆಯಲಿ ತಾನೇ ದೈವವೆಂಬಾ
ರವರೊಬ್ಬರು ವೇದಾರ್ಥ ವರಿತುವರಿಯರು 
ಇವರೊಬ್ಬರು ಶಾಸ್ತ್ರಾರ್ಥವರಿತು ವರಿಯರು 
ಒಬ್ಬ ಮಧ್ವಾಚಾರಿಯಾರೆ ಪುರಂದರವಿಠ್ಠಲನ್ನ 
ದೈವವೆಂದು ತೋರಿಕೊಟ್ಟರಾಗಿ ॥ 1 ॥

 ಮಟ್ಟತಾಳ 

ಹರಿ ಪರದೇವತಿ ಎಂಬ ಜ್ಞಾನವೆ ಜ್ಞಾನ 
ಹರಿ ಅಡಿಗಳನೈದುವ ಭಕುತಿಯೇ ಮುಕುತಿ 
ಹರಿ ವಿರಹಿತ ಜ್ಞಾನ ಮಿಥ್ಯಾಜ್ಞಾನ 
ಹರಿ ವಿರಹಿತ ಮುಕುತಿ ಮಾತಿನ ಮುಕುತಿ 
ಸಿರಿ ಮಧ್ವಾಚಾರ್ಯರೆ ಗುರುಗಳು ತ್ರೈಲೋಕಕ್ಕೆ
 ಪುರಂದರವಿಠ್ಠಲರಾಯನ ತೋರಿ ಕೊಟ್ಟರಾಗಿ ॥ 2 ॥

 ರೂಪಕತಾಳ 

ಸೋಹಂ ಎಂದೆಂದು ಈ ಲೋಕವ 
ಮೋಹಿಸುವರ ನಿರಾಕರಿಸಿ ದಾ -
ಸೋಹಂ ಎಂಬ ರಹಸ್ಯವನರುಪಿ ದಾ -
ಸೋಹಂ ಎಂಬ ಸಿರಿ ಪುರಂದರವಿಠಲನಾಳು 
ಮಧ್ವಮುನಿ ದಾಸೋಹಂ ಎಂಬ ॥ 3 ॥

 ಝಂಪೆತಾಳ 

ಏಕವಿಂಶತಿ ಕುಭಾಷ್ಯಕೆ ದೂಷಕನೆಂಬ ಬಿರುದು 
ನಮ್ಮ ಗುರುರಾಯರಿಗಲ್ಲದುಂಟೆ 
ನಮ್ಮ ಕುಲಗುರು ಮಧ್ವಮುನಿಗಳಲ್ಲದುಂಟೆ 
 ಪುರಂದರವಿಠಲ ಪರನೆಂಬ ಸಿದ್ಧಾಂತ ॥ 4 ॥

 ತ್ರಿಪುಟತಾಳ 

ವೈದೀಕ ಮತದಲ್ಲಿ ನಡೆದೆವೆಂದು ತಾವು 
ವೈದೀಕವಂ ಬಿಟ್ಟು ಕೊಟ್ಟರು ಕೆಲವರು 
ವೈಷ್ಣವ ಮತದಲ್ಲಿ ನಡದೆವೆಂದು ತಾವು 
ವೈಷ್ಣವಂ ಬಿಟ್ಟು ಕೊಟ್ಟರು ಕೆಲವರು 
ವೈದೀಕ ವೈಷ್ಣವ ಒಂದೇ ಎಂದು ಮಧ್ವಮುನಿ 
ಪ್ರತಿಪಾದಿಸಿದ ಪುರಂದರವಿಠಲ ಮೆಚ್ಚಿ ॥ 5 ॥

 ಅಟ್ಟತಾಳ 

ಸುರತರು ಫಲಿಸಿರೆ ಯಲವದ ಮರ ಫಲಿಸಿಪ್ಪಂತೆ 
ಗುರುಗಳಾದರು ನೋಡ ಸಿರಿ ಪುರಂದರವಿಠ್ಠಲನ 
ತೋರಿದ ಮಧ್ವಾಚಾರ್ಯರು ಗುರುಗಳಾದರು ನೋಡ ॥ 6 ॥

 ಏಕತಾಳ 

ಹರಿ ಪರಮಗುರು ಪರಮೇಷ್ಠಿ ಗುರು 
ಸುರಗುರು ಮಧ್ವಾಚಾರ್ಯ ಚಕ್ರವರ್ತಿ 
 ಪುರಂದರವಿಠ್ಠಲನ ದಯದಿಂದ ॥ 7 ॥

 ಜತೆ 

 ಪುರಂದರವಿಠ್ಠಲಗೆ ಗುರುಮಧ್ವಾಚಾರ್ಯರಿಗೆ 
ಶರಣು ಶರಣೆಂಬೆನೋ ಅನವರತಾ ॥
*************




ಶ್ರೀ ಪುರಂದರದಾಸಾರ್ಯ ವಿರಚಿತ   ಶ್ರೀ ಮಧ್ವಾಚಾರ್ಯರ ಸುಳಾದಿ 

ರಾಗ ಕಲ್ಯಾಣಿ  ಧ್ರುವತಾಳ 

ಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |
ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |
ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ ।
ನಿರವಯವನೆಂದ ಕಡೆಯಲಿ ತಾನೇ ದೈವವೆಂದ |
ಅವರೊಬ್ಬರೂ ವೇದಾರ್ಥವರಿತೂ ಅರಿಯರು |
ಇವರೊಬ್ಬರು ಶಾಸ್ತ್ರಾರ್ಥವರಿತೂ ಅರಿಯರು |
ಒಬ್ಬ ಮಧ್ವಾಚಾರಿಯನೆ ಪುರಂದರವಿಠಲನ । 
ಒಬ್ಬನೇ ದೈವವೆಂದು ತೋರಿಕೊಟ್ಟರಾಗಿ || 1 ||

ಮಟ್ಟತಾಳ 

ಹರಿ ಪರದೇವತೆ ಎಂಬ ಜ್ಞಾನವೇ ಜ್ಞಾನ |
ಹರಿ ಅಡಿಗಳನೈದುವ ಮುಕುತಿಯೇ ಮುಕುತಿ |
ಹರಿ ವಿರಹಿತ ಜ್ಞಾನ ಮಿಥ್ಯಾಜ್ಞಾನ |
ಹರಿ ವಿರಹಿತ ಭಕುತಿ ಮಾತಿನ ಭಕುತಿ |
ಸಿರಿ ಮಧ್ವಾಚಾರ್ಯರೇ ಗುರುಗಳು ತ್ರೈಲೋಕಕೆ 
ಪುರಂದರವಿಠಲನ ತೋರಿ ಕೊಟ್ಟರಾಗಿ || 2 ||

ರೂಪಕತಾಳ 

ಸೋಹಂ ಎಂದೆಂದು ಈ ಲೋಕವ 
ಮೋಹಿಸುವವರ ನಿರಾಕರಿಸಿ ದಾ -
ಸೋಹಂ ಎಂಬ ರಹಸ್ಯವನರುಪಿದ 
ಸೋಹಂ ಎಂಬ ಸಿರಿ ಪುರಂದರವಿಠಲನಾಳು 
ಮಧ್ವಮುನಿ ದಾಸೋಹಂ ಎಂಬ || 3 ||

ಝಂಪೆತಾಳ 

ಏಕವಿಂಶತಿ ಕುಭಾಷ್ಯಕೆ ದೂಷಕನೆಂಬ ಬಿರುದು 
ನಮ್ಮ ಗುರುರಾಯರಿಗಲ್ಲದುಂಟೆ |
ನಮ್ಮ ಕುಲಗುರು ಮಧ್ವಮುನಿಗಳಲ್ಲದುಂಟೆ 
ಪುರಂದರವಿಠಲ ಪರನೆಂಬ ಸಿದ್ಧಾಂತ || 4 ||

ತ್ರಿಪುಟತಾಳ 

ವೈದಿಕ ಮತದಲ್ಲಿ ನಡೆದೆವೆಂದು ತಾವು 
ವೈದಿಕವಂ ಬಿಟ್ಟುಕೊಟ್ಟರು ಕೆಲವರು | 
ವೈಷ್ಣವ ಮತದಲ್ಲಿ ನಡದೆವೆಂದು ತಾವು 
ವೈಷ್ಣವಂ ಬಿಟ್ಟು ಕೊಟ್ಟರು ಕೆಲವರು |
ವೈದಿಕ ವೈಷ್ಣವ ಒಂದೇ ಎಂದು ಮಧ್ವಮುನಿ 
ಪ್ರತಿಪಾದಿಸಿದ ಪುರಂದರವಿಠಲ ಮೆಚ್ಚೆ || 5 ||

ಅಟ್ಟತಾಳ 

ಸುರತರು ಫಲಿಸಿರೆ ಎಲವದ ಮರ ಫಲಿಸಿಪ್ಪಂತೆ |
ಗುರುಗಳಾದರು ನೋಡ ಸಿರಿ ಪುರಂದರವಿಠಲನ 
ತೋರಿದ ಮಧ್ವಾಚಾರ್ಯರು ಗುರುಗಳಾದರು ನೋಡ || 6 ||

ಏಕತಾಳ 

ಹರಿ ಪರಮಗುರು ಪರಮೇಷ್ಠಿ ಗುರು 
ಸುರಗುರು ಮಧ್ವಾಚಾರ್ಯ ಚಕ್ರವರ್ತಿ 
ಪುರಂದರವಿಠಲನ ದಯದಿಂದ ॥ 7 ॥

ಜತೆ 

ಪುರಂದರವಿಠಲಗೆ ಗುರುಮಧ್ವಾಚಾರ್ಯರಿಗೆ 

ಶರಣು ಶರಣೆಂಬೆನೋ ಅನವರತ ॥
**********