Audio by Mrs. Nandini Sripad
ಶ್ರೀ ವ್ಯಾಸರಾಜ ವಿರಚಿತ ಭಕ್ತಾಧೀನ ಸುಳಾದಿ
ರಾಗ ಮುಖಾರಿ
ಧ್ರುವತಾಳ
ನಾನಾ ಯಜ್ಞದ ಹವಿರ್ಗಳಿಂದ
ಕದ್ದಾ ಬೆಣ್ಣಿಯು ಮಿಗಿಲೆ
ಜ್ಞಾನಿಗಳಿತ್ತಾ ಉಪಹಾರಗಳಿಂದಂ
ವಪ್ಪಿಡಿ ಆವಲೊಳಿತೆ
ಶ್ರೀನಾರಿ ಮಾಡುವ ಸೇವೆಗಳಿಂದಂ
ಯಜ್ಞ ಪತ್ನೇರ ತಿರಿಕೆ ಭಿಕ್ಷೆಯು ಬೇಕೆ
ಏನನ್ನೆ ಬಾರದ ನಿನ್ನಾನಂದಕೆ ವಿದು -
ರನೌತುನ ಮಿಗಿಲೆ ಬೇಕೆ ಅಯ್ಯಾ
ಮಾನಸ ವಚನಕಗೋಚರವಾದ
ಆನಂದ ನೀನಲ್ಲವೆ
ಏನಯ್ಯ ನಿನ್ನ ಭಕುತ ವಾತ್ಸಲ್ಯತನವೊ
ಎಲೆ ಎಲೆ ಕೃಷ್ಣಯ್ಯ
ನೀನೇವೆ ಬೇಡಿ ಕಾಡಿ ಯಶೋದೇಯ ಕಯ್ಯಾ ಉ -
ಘಾನೆರಸಿಕೊಂಡು ನಲಿದೇ ಅಯ್ಯಾ ॥ 1 ॥
ಮಠ್ಯತಾಳ
ಶ್ರೀವರ ಪರಾಕು ಚಿತ್ತವಧಾರಿ ಎಂದು ನಿನ್ನ
ಆವಗ ಅಜಭವಾದಿ ದೇವರೋಲ್ಗೈಸುತಿರೆ
ದೇವ ಸಾರ್ವಭೌಮ ನೀನುಗ್ರಶೇನಂಗೆ
ದೇವ ಜೀಯ್ಯ ಸಾಸಮುಖವೆಂದೆಂಬದು
ಆವ ಲೀಲೆಯು ನಿನಗೆ ಭಕುತವತ್ಸಲ ಸಿರಿಕೃಷ್ಣ ॥ 2 ॥
ತ್ರಿವಿಡಿತಾಳ
ಮುನಿ ಮನಂಗಳಲ್ಲಿ ನೆನೆದು ಕಾಣಾದು
ಅನಂತ ವೇದಗಳು ಅರಸಿ ಕಾಣವು
ಚಿನ್ಮಯನೆ ನೀನು ಕುಬುಜೆಯ
ಮನ್ನೆಯಾರಸಿ ಕೊಂಡ್ಯಾಕೆ ಪೋಗೆ
ವನ್ನತೆ ಸಿರಿ ಎಂಬೊ ಘನ್ನತೆ ಮೆರೆಯಲು
ನಿನ್ನವರಲ್ಲಿ ಅಳುಕಂದಿ ತನವೇನೋ
ಘನವಲ್ಲವೊ ನಿನಗೇವೆ ಎಲೆ ಕೃಷ್ಣಯ್ಯ ॥ 3 ॥
ಅಟ್ಟತಾಳ
ನಿನ್ನ ಮೂರುತಿ ಒಮ್ಮೆ ನೆನೆದಡಂ ನೋಡಿದಡಂ
ನಿನ್ನ ನಾಮವನ್ನೊಮ್ಮೆ ಪಾಡಿದಡಂ
ಘನ್ನ ಭವಬಂಧ ಪರಿವದೊ ಇಂ -
ತೆನ್ನು ಕಟ್ಟಿದಳೆಂತು ಯಶೋದೆ
ನಿನ್ನ ನೆಲೆ ಗೋಪಿ ಘನ್ನ
ಚನ್ನ ಕೃಷ್ಣ ವಿನೋದಿಗಳರಸನೆ ॥ 4 ॥
ಏಕತಾಳ
ದಹರಾಕಾಶದಿ ತತ್ತ ದ್ವಾರದಿ
ದ್ರುಹಿಣಾದ್ಯರು ನಿನ್ನ ವಾಲ್ಗೈಸುತಿರಲು
ಪ್ರಹರಿಯೆ ಕಾಯಿದೆಂತೊ ಮಹಂ
ಮಹಿಮನೆ ಯೆತ್ತಿರವುತ ಪರಿಕ್ಷಿತುವಿಗೆ ಈ
ಮಹ ಮಹಿಮ ಭಕುತರ ಆರಭಾರ
ವೊಹಿಸುವ ಅಕ್ಕರಕ್ಕೆ ನಮೊ ನಮೊ ಸಿರಿಕೃಷ್ಣ ॥ 5 ॥
ಜತೆ
ಚಕ್ರವರ್ತಿಯು ತನ್ನ ಶಿಶುಗಳಿಗೆಯಂತೊ
ಭಕುತರ್ಗೆ ಅತಿ ಸುಲಭ ನಮ್ಮ ಸಿರಿಕೃಷ್ಣ ॥
*********