Showing posts with label ಗಂಗಾಪಿತ ರಾಘವ ನಂಬಿದೆ ಶ್ಯಾಮಲಾಂಗ pranesha vittala. Show all posts
Showing posts with label ಗಂಗಾಪಿತ ರಾಘವ ನಂಬಿದೆ ಶ್ಯಾಮಲಾಂಗ pranesha vittala. Show all posts

Monday 11 November 2019

ಗಂಗಾಪಿತ ರಾಘವ ನಂಬಿದೆ ಶ್ಯಾಮಲಾಂಗ ankita pranesha vittala

by ಪ್ರಾಣೇಶದಾಸರು
ಗಂಗಾಪಿತ ರಾಘವ ನಂಬಿದೆ ಶ್ಯಾಮ-ಲಾಂಗ ನಿನ್ನಯ ಪಾದವ ||ಮಂಗಳೆ ರಮಣ ಭುಜಂಗಧರಾರ್ಚಿತಾ |ನಂಗಜ ಜನಕ ಪಾಲಿಸಿಂಗಡಲೊಡೆಯನೆ ಪ

ಶಫರ, ಕಮಠ,ಕೋಲನೃಹರಿ ಬಾಲ |ನೃಪಕುಲ ಪವನ ವ್ಯಾಲ ||ವಿಪಿನಸಂಚರಾ ಕೃಷ್ಣ ವಿಪುಳಾಬುದ್ಧಕಲ್ಕಿ |ವಪುಧರ ಅನಿರುದ್ಧಕೃಪಣವತ್ಸಲ ಸ್ವರ್ಪಾ- ||ದಪನೆಹರಿಕಾಶ್ಯಪಿಯೊಳಗೆ ಸುರ ರಿಪುಹ | ಶಿವನ ಕ |ರಿಪನ ನರಪತಿ ದ್ರುಪದ ನಂದನೆಯ ಪೊರೆದೀಶ್ವರ |ಕಪಟನಾಟಕ ಕಪಿಲ ರೂಪಿ 1

ಕುರು ಕುಲೋತ್ತಮನಾಗಾರದೊಳಗೆಕ್ಷೀರ|ಸುರಿದೆ ಗೋಕುಲ ವಿಹಾರ ||ವರವಿಪ್ರಜರ ತಂದೆ ಹರಚಾಪಹನನಈ |ಶರೀರವೇ ನಿನ್ನದು ಸರಿಬಂದದನು ಮಾಡೋ ||ಕರೆಕರೆಯ ಭವಶರಧಿಯೊಳು ಬಾ- |ಯ್ದೆರೆವೆ ರಕ್ಷಿಸುವರನು ಕಾಣೆನೊಬ್ಬರ ನಿನ್ನುಳಿ- ||ದುರಗ ಶಯನನೇ ಧರಿಜವಲ್ಲಭಕರುಣಿ ಕೇಶವ2

ಜನನ ಮರಣ ದೂರ ಇಂದ್ರಾನುಜ |ಮುನಿ ಗೇಯಾ ಚಲಧರ ||ವನರುಹಭವಸಂಕ್ರಂದನವಂದ್ಯ ವೀತ ಆ |ವನಿ ಮುಖ ತನ್ಮಾತ್ರಾಗುಣ ಪ್ರಾಣೇಶ ವಿಠಲ ||ಪ್ರನಮಿತಾಘ ಕಕ್ಷಾನಲ ಕಂದರ್ಪನ ಪಿತನೆ |ನಿನ್ನನುಗರೊಳಗಿಡೋ ಮಣಿಯೇ ಅನ್ಯರಿ ||ಗನಘ ಪಾಲಿಪುದನವರತ ಯನ್ನನು ಬಿಡದಲೆ 3
******