.
ಮರೆಯದೆ ನೆನೆ ಚಿನ್ಮಯನ ll ಪ ll
ಹರಿಸರ್ವೋತ್ತಮ ಅಚ್ಯುತನ ll ಅ ಪ ll
ಮಗಳನು ತಾನೆ ಮದುವ್ಯಾದವನ
ಮಗಳ ಮಗನ ಮೊಮ್ಮಗನ
ಮಗಳಗಂಡನ ಮೇಲ್ಮಲಗಿದ ಜಾಣನ
ಮಗಳ ಮಾವನಿಗೆ ಮೈದುನನ ll 1 ll
ತಂದೆಗೆ ತಾನೆ ತಂದೆಯಾದವನ
ತಂದೆಯ ಮಾತೆಯ ತಂದವನ
ತಂದೆಗೆ ಪೂರ್ವದಿ ತಾ ಪುಟ್ಟಿಹನ
ತಂದೆಗೆ ತಂದೆಯ ತಂದೆಯನ ll 2 ll
ರಾಮನ ಸಮರೋದ್ದಾಮನ ಸುಗುಣಾಭಿ
ರಾಮನ ಸೀತಾನಾಯಕನ
ಕಾಮನ ಪೆತ್ತನ್ನ ಕಮಲದಳಾಕ್ಷನ್ನ
ಪ್ರೇಮದಿ ನೆಲೆಯಾದಿಕೇಶವ ll 3 ll
***
ಮರೆಯದೆ ನೆನೆ ಚಿನ್ಮಯನ ಹರಿನಾರಾಯಣ ಅಚ್ಯುತನ ಪ
ಮಗಳ ತಾನೆ ಮದುವೆಯಾದವನಮಗಳ ಮಗನ ಮೊಮ್ಮಗನಮಗಳ ಗಂಡನ ಮೇಲೆ ಮಲಗಿದ ಜಾಣನಮಗಳ ಮಾವನಿಗೆ ಮೈದುನನ1
ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನತಂದೆಗೆ ಪೂರ್ವದಿ ತಾ ಪುಟ್ಟಿಹನತಂದೆಗೆ ತಂದೆಗೆ ತಂದೆಯಹನ 2
ರಾಮನ ಸಮರೋದ್ಧಾಮನ ಸುಗುಣಾಭಿರಾಮನ ಸೀತಾನಾಯಕನರಾಮನ ಪೆತ್ತನ ಕಮಲದಳಾಕ್ಷನಪ್ರೇಮದಿ ನೆಲೆಯಾದಿಕೇಶವನ3
***