..
ಬಾರೊ ಮುಂದಿರೊ ಪರನಾರಿಸಹೋದರಮಾರ ನಿನಗಾರ ಮುದ್ದತಾರ ವೀರಹನುಮ ಪ.
ಮರಗಳ ಮುರಿದೆ ಕರೆಕರೆದು ನೆರೆದಸುರರಶಿರಂಗಳ ತರಿದೆ ನಿನ್ನ ಸರಿಯಾರೋ ವೀರ ಹನುಮ 1
ಕಂಡೆ ನಿನ್ನ ಬಲವ ಸುಪ್ರಚಂಡ ರಿಪುಕುಲವತುಂಡು ತುಂಡಿಕ್ಕಿ ಮೆರೆದೆ ಬಲುಗಂಡೆ ವೀರ ಹನುಮ 2
ಎನ್ನೊಡೆಯ ಶ್ರೀಹಯವದನಗೆ ರನ್ನದ ಕನ್ನಡಿಯಂತೆ ಪ್ರಸನ್ನ ಮೋಹದ ......ಬಾಳು ಬಾಳು ವೀರ ಹನುಮ 3
***