Showing posts with label ಬಲಿಗೊಲಿದು ಬಂದ vijaya vittala ankita suladi ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ BALIGOLIDU BANDA PANCHA TIRUPATI SULADI. Show all posts
Showing posts with label ಬಲಿಗೊಲಿದು ಬಂದ vijaya vittala ankita suladi ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ BALIGOLIDU BANDA PANCHA TIRUPATI SULADI. Show all posts

Friday, 13 November 2020

ಬಲಿಗೊಲಿದು ಬಂದ vijaya vittala ankita suladi ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ BALIGOLIDU BANDA PANCHA TIRUPATI SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ 


 ರಾಗ : ಶಂಕರಾಭರಣ 

 ಧ್ರುವತಾಳ 


ಬಲಿಗೊಲಿದು ಬಂದದೊಂದು ಮೂರುತಿ 

ಕಳಸಾಜಾಗೊಲಿದದೊಂದು ಮೂರುತಿ 

ಭಳಿರೆ ಭೃಗಗೊಲಿದದೊಂದು ಮೂರುತಿ 

ಸಲೆ ನಾರದಗೊಲೆದದೊಂದು ಮೂರುತಿ 

ಚೆಲುವ ಸಪ್ತರಿಗೊಲಿದದೊಂದು ಮೂರುತಿ 

ಇಳಿಯೊಳು ಮಹೇಂದ್ರಾಚಲದಲ್ಲಿ ಮೆರೆವ

ಅಗ್ಗಳಿ ದೈವವಾದ ಪಂಚ ಮೂರುತಿ 

ಒಲಿದವರಿಗೆ ಸುಲಭವಾ ಮಾನಾದಿರೂಪಾ 

ಛಲದಂತಾ ವಿಜಯವಿಠಲ ಮೂರುತಿ 

ಬಲಗೊಲಿದು ಬಂದಾದೊಂದು ಮೂರುತಿ ll1ll


 ಮಟ್ಟತಾಳ 


ಲೋಕಮೋಹಕನಾಗಿ ಕಾಕುಸ್ಥವಂಶಜನು 

ಸ್ವಕಾಂತಿಯನಗಲಿ ಲೌಕಿಕನ ತೆರದಿ 

ವ್ಯಾಕುಲದಲಿ ದಿವಾಕರ ನಂದನನತಾಕಲತಾ ನೆನಸಿ 

ಆ ಕಪಿ ಬಲವನು ಸಾಕಾರವಾಗಿ 

ಭೂ ಕುಮಾರಿಯನು ಏಕವಾಗಿ ನೋಡಬೇಕೆಂದು ಪೇಳಲು 

ಶ್ರೀಕಾಂತ ವಿಜಯವಿಠಲಾ ರ-

ಘು ಕುಲೋತ್ತಮನಾ 

ವಾಕು ಕೇಳುತಲೀವೆ ಶಾಕಮೃಗಾದಿಗಳು 

ಮೇಖಿಗೆ ಹರಿದೂ ಜೋಕೆಯಿಂದಲಿ ಬರಲು 

ಲೋಕ ಮೋಹಕವಾಗೀ ll2ll


 ರೂಪಕತಾಳ 


ಹನುಮಾಂಗದ ನೀಲ ವನಜಸಂಭವನಂದನ ಜಾಂಬವಂತಾನು 

ಘನವಾದ ಕಪಿಗಳು ಇನತನಯನ ಆಜ್ಞಾ-

ವನು ಕೈಕೊಂಡು ದಕ್ಷಿಣ ದಿಕ್ಕಿಗೈದದರೂ 

ಜನಕ ಸುತೆಯ ನೋಡಾಲನುವಾಗಿ ಹತ್ತೊಂದ್ಯೊ -

ಜನವುಳ್ಳ ಮಹೇಂದ್ರಾವನ ಸರೋವರ ಲಕ್ಷಣ ಉಳ್ಳಾಕ್ಷೇತ್ರ 

ಮನಕೆ ಶೋಭಿಸಲಾಗಿ ಹನುಮಾದಿಗಳು ನಿಂದು 

ಮಣಿದು ಪೊಗಳಿದರು ವಾಮನ ಮಿಕ್ಕಾದ ಮೂರ್ತಿಗಳ 

ಗುಣನಿಧಿ ವಿಜಯವಿಠಲ ಪಂಚತಿರುಪತಿ 

ನೆನದವರಿಗೆ ನಂಬಿ ಎನಿಸುವಾ ದೈವ ll3ll


 ಝಂಪೆತಾಳ 


ವೇಗದಲಿ ಹನುಮಂತ ದಿಕ್ಕು ನೋಡುವೆನೆಂದು 

ಈ ಗಿರಿಯ ಮೇಲೆ ತುಳಿದು ನೀಕ್ಷಿಸಿ 

ಆಗಲೀ ಪರ್ವತ ಹತ್ತುಯೋಜನವಿಳಿದು 

ಪೋಗಲಾಯಿತು ಧರಿಗೆ ಏನಂಬೆನೋ 

ಆಗ ಪುಟ್ಟಿತು ಕ್ಷೀರನದಿ ಹನುಮ ನದಿ ಎಂದೂ 

ಯೋಗಿಗಳು ಭಜಿಸಿದರು ವಿನಯದಿಂದ 

ಭಾಗವತರಿಗೆ ಒಲಿದ ನಂಬಿ ವಿಜಯವಿಠಲ 

ಸಾಗರಶಯನ ಪಂಚತಿರುಪತಿ ವಾಸಾ ll4ll


 ತ್ರಿವಿಡಿತಾಳ 


ಕೂರಂಗನೆಂಬುವ ಕ್ರೂರ ದೈತ್ಯನು ಇಲ್ಲಿ 

ಶೇರಿಕೊಂಡಿದ್ದು ಸಂಚಾರ ಮಾಡುತಲಿರೆ 

ಧಾರುಣಿಯೊಳಗೊಬ್ಬ ಪರಮ ಭಾಗವತನು 

ವಾರವಾರಕ್ಕೆ ಈ ಕ್ಷೇತ್ರಕ್ಕೆ ಬರುತಿರಲು 

ಕ್ರೂರದೈತ್ಯನು ಬುಧನಾಹಾರ ಮಾಡುವೆನೆನಲೂ 

ಮಾರಿಗಭಯನಿತ್ತು ಶ್ರೀ ರಮಣನಾ ಚರ-

ಣಾರವಿಂದವ ನೋಡಿ ಪೋಗಿ ನಿಲ್ಲಲು ದೈತ್ಯ 

ಮೇರೆದಪ್ಪಿದ ಲೀನಾರದಾವಿನುತಾನು 

ಕಾರುಣ್ಯದಲಿ ನಿಂದು ಮೂರುತಿ ತೋರಿದಾ 

ಸಾರಾ ಹೃದಯಗೊಲಿದು ಘೋರತನವೆ ಬಿಡಿಸಿ 

ಕೂರಂಗನಾ ಸಾಕಿ ಧಾರುಣಿಯೊಳಗಿದ್ದು 

ಕೂರಂಗಕ್ಷೇತ್ರ ವಿಸ್ತಾರವೆಂದೆನಿಸಿದ 

ಕಾರುಣ್ಯಕೋಟೀಯಾ ತೀರತವಾಸಾ 

ಮಾರಾರಿವಿನುತಾ ಶ್ರೀ ವಿಜಯವಿಠಲರೇಯಾ 

ಸಾರಿದವರ ಪೊರವ ಕ್ಷೀರಸಾಗರನಂಬಿ ll5ll


 ಅಟ್ಟತಾಳ 


ವಾಯಸ ಬಂದು ಕೋಟಿತೀರ್ಥದೊಳು 

ಮಿಯಾಲು ಹೇಮಾ ವಾಯಸವಾದುದು ಕೇಳಿ 

ಆ ಇಂದ್ರಸೇನನು ಮೊದಲಾದವರಲ್ಲಿ 

ಶ್ರೀ ಅರಸನ ಒಲಿಸಿದರು ಭಕುತಿಯಲ್ಲಿ 

ಭೂವ್ಯೋಮಾ ಪಾತಾಳದೊಳಗೆ ಎದುರುಗಾಣೆ 

ಈ ಯವನಿಗೆ ನೋಡಿದರು ಅನುಗಾಲಾ 

ತಾಯಿ ಮಕ್ಕಳನ್ನ ಪೊರೆದಂತೆ ಪೊರೆವುತಾ 

ಶ್ರೇಯಸ್ಸು ತಂದುಕೊಡುವುದು ಶುಭದಲ್ಲಿ 

ಬೀಯಗೆ ವೊಲಿದ ವಿಜಯವಿಠಲರೇಯ ಕುರಂಗ

ಕ್ಷೇತ್ರನಿವಾಸ ll6ll


 ಆದಿತಾಳ 


ನಿಂದ ಮೂರುತಿ ಕುಳಿತ ಮೂರುತಿ 

ಇಂದುಧರಗಭಿಮುಖವಾಗಿ 

ಚಂದದಲಿ ಮಲಗಿದ್ದ ಮೂರುತಿ 

ಸಿಂಧು ತಡಿಯದಲ್ಲಿ ಅಂದಬಂದಾನಿಂದ ಮೂರ್ತಿ 

ಕುಂದದಲೆ ಮಹೇಂದ್ರ ಗಿರಿಯೊಳು 

ನಂದ ಮಾಡುತ ತಾಪೊಳೆವಾ ಮೂರುತಿ 

ಸಿಂಧುರಿಪು ಭೃಗುಮುನಿ ವರನಾರಂದಾ

ಬಲಿ ಸಪ್ತ ಋಷಿಗಳಿಗೆ 

ವಂದನೆಗೈಯಲು ದಯದಿಂದಲಿದ್ದ ಐದುಮೂರ್ತಿ 

ಒಂದೆ ಕಾಣೊ ವಿಜಯವಿಠಲ ಹಿಂದೆ ಇದ್ದ

ನರಹರಿ ಮೂರ್ತಿ ll7ll


 ಜತೆ 


ರಂಗರಾಜಾನೆ ಸಂಗೀತರಲೋಲಾ ಕು-

ರಂಗಕ್ಷೇತ್ರ ಪಂಚ ನಂಬಿ ವಿಜಯವಿಠಲ ll8ll

********