ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ.
ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ 1
ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ2
ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ 3
ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ4
ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ5
ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ6
ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ7
****