Showing posts with label ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ hayavadana. Show all posts
Showing posts with label ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ hayavadana. Show all posts

Wednesday, 1 September 2021

ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ankita hayavadana

 ..

ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ಪ.


ಮಾತಾಪಿತರುಯೆಂಬೊ ಭಕ್ತಿಚಿತ್ರಾನ್ನವಪಾರ್ಥಸೂತನ ಪಾದಪದ್ಮಪತ್ರವ ಹಾಸಿ ಅ.ಪ.


ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವುವಿರಜಾನದಿಯ ದಾಟಿರೊಕರಜಾಗ್ರಗಳಿಂದ ಹಿರಣ್ಯಕನನು ಸೀಳಿದಪರವಾಸುದೇವನ ದರುಶನವಾಹೋದಯ್ಯ 1


ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನುಚಳಿ ಮಳೆ ಬಿಸಿಲಿಲ್ಲವೊಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತುನಳಿನನಾಭನ ಪುರದೊಳಗೆ ನೆಲಸಿಹುದಯ್ಯ 2


ಶುದ್ಧ ಸಾತ್ವಿಕ ಪುರವು ತಾಮಸರಿಗೆ[ಪೊದ್ದಲಳವಲ್ಲವೊ]ಅಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದತದ್ಧಾಮ ಪರಮಂ ಮಮವೆಂಬೊ ಪುರವೊ 3


ಕೂಗಳತೆಗೆ ಕೊಂಚವೊ ಹರಿಯ ಪುರನಾಗರಾಜನ ಸಾಕ್ಷಿಯೊನಾಗಶಯನನಲ್ಲಿ ನಮ್ಮ ಕಂಡರೆಹೋಗಬೇಡಿರೆಂದು ಹುಟ್ಟ ತಡೆವನೊ 4


ಬರವೆಂಬ ಮಾತಿಲ್ಲವೊ ಒಂದುಕಾಸುತೆರಿಗೆಯ ಕೊಡಬ್ಯಾಡಿರೊಪರಮಕರುಣಿ ಹಯವದನ ವೈಕುಂಠದಿಸರುವಮಾನ್ಯವನಿತ್ತು ಶರಣರ ಪೊರೆವನು 5

***