ವಲಿದು ಮೊರಿಯಾ ಲಾಲಿಸೊ l
ಅಲವ ಬೋಧರಾ ಹೃದಯಾ ಜಲಜವಾಸ ಕೃಷ್ಣ ll ಪ ll
ದುರಿತಾದ್ರಿಕುಲಿಶಾ ಸುಂದರಾ ಸುಮಂಗಳಕರಾ l
ತರುಳಾ ಪ್ರಹ್ಲಾದಪಾಲಾ l
ಹರಿಯೆ ನಿನ್ನವರಾನೀಪರಿ ಬನ್ನಾ ಬಡಿಪಾರೆ l
ಶರಣಾರ ಭಯವೆಂಬಾ ಕರಿಗೆ ಹರಿಯಕ್ಷಾ ll 1 ll
ದೋಷಾದೂರನೇ ನಿನ್ನಾದಾಸಾರು ಅನ್ಯರಾ l
ಯಾಸ ಸೈರಿಸಲಾರದೇ l
ಶ್ರೀಶಾ ನಿನ್ನಾಜ್ಞದಿ ಲೇಸು ಮಾಡಲು ನೀ ಆ l
ದೋಷಾವೆಣಿಸಿ ಈಗಾ ಘಾಸೆ ಬಡಿಸುವಾರೆ ll 2 ll
ಪನ್ನಗಾದ್ರಿನಿಲಯಾ ಅನಿಮಿತ್ತ ಬಂಧೋ l
ಮನ್ನಿಸೆನ್ನ ಬಿನ್ನಪಾ ll
ಧನ್ವಂತ್ರಿಯೆ ತಂದೆಗೋಪಾಲವಿಟ್ಠಲ l
ನಿನ್ನವರವನೆಂದು ಎನ್ನಾ ಕರವಾ ಪಿಡಿಯೊ ll 3 ll
***