Showing posts with label ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು ramesha. Show all posts
Showing posts with label ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು ramesha. Show all posts

Tuesday, 15 October 2019

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು ankita ramesha

ಗಲಗಲಿ ಅವ್ವನವರು

ಪಾಲಿಸೆ ಸರಸ್ವತಿ ಪಾಲಿಸೆ ಪಾಲಿಸೆ ನಿನ್ನಯ ಪಾಲಿಗೆ ಬಂದೆನು 
ಕಾಲಕಾಲಕೆ ನಿನ್ನಯ ಕಾಲಿಗೆರಗುವೆ ಪಾಲಿಸೆ                  ।।ಪ॥ 

ಆದಿ ಬ್ರಹ್ಮನ ರಾಣಿಯೆ ವೇದಕ್ಕಭಿಮಾನಿಯೆ 
ಮೋದ ಗಾಯನ ಕುಶಳಲೆ 
ಮೋದ ಗಾಯನ ಕುಶಳಲೆ ಸರಸ್ವತಿ 
ನೀ ದಯಮಾಡಿ ಮತಿಯ ಕೊಡು                                  ।।೧।।

ಹೊನ್ನವರೆ ಹೊಸ ಕಪ್ಪುಬೆನ್ನಿನ ಮ್ಯಾಲಿನ ಹೆರಳು 
ಕಿನ್ನರಿ ನಿನ್ನ ಬಲಗೈಯ
ಕಿನ್ನರಿ ನಿನ್ನ ಬಲಗೈಯಲಿ ಹಿಡಕೊಂಡು 
ಖನಿ ಬಾ ನಮ್ಮ ವಚನಕ್ಕೆ                                            ।।೨।।

ಮಿತ್ರಿ ಸರಸ್ವತಿಗೆ  ಮುತ್ತಿನ ಉಡಿಯಕ್ಕಿ 
ಮತ್ತೆ ಮಲ್ಲಿಗೆಯ ನೆನೆದಂಡೆ 
ಮತ್ತೆ ಮಲ್ಲಿಗೆಯ ನೆನೆದಂಡೆ ತಂದಿದೆ 
ಪ್ರತ್ಯಕ್ಷವಾಗ ಸಭೆಯೊಳು                                            ।।೩।।

ಹರದಿ ಸರಸ್ವತಿಗೆ ಹವಳದ ಉಡಿಯಕ್ಕಿ 
ಅರಳು ಮಲ್ಲಿಗೆ ನೆನೆದಂಡೆ
ಅರಳು ಮಲ್ಲಿಗೆ ನೆನೆದಂಡೆ ತಂದಿದೆ 
ತಡೆಯದೆ ನಮಗೆ ವರವಕೊಡು                                    ।।೪।।

ಗುಜ್ಜಿಸರಸ್ವತಿಗೆ ಗೆಜ್ಜಿಸರಪಳಿಯಿಟ್ಟು 
ವಜ್ರ ಮಾಣಿಕ್ಯದಾಭರಣ 
ವಜ್ರ ಮಾಣಿಕ್ಯದಾಭರಣ ಭೂಷಿತಳಾಗಿ 
ನಿರ್ಜರೊಳುತ್ತಮಳೆ ನಡೆ ಮುಂದೆ                                 ।।೫।।

ಹರಡಿ ಸರಸ್ವತಿ-ಸರಿಗೆ ದಾರಿಗಳಿಟ್ಟು 
ಜರದ ಸೀರೆಯನೆ ನಿರಿದಿಟ್ಟು 
ಜರದ ಸೀರೆಯನೆ ನಿರಿದಿಟ್ಟು ಬಾರಮ್ಮ
ದೊರೆ ರಾಮೇಶನ ಅರಮನೆಗೆ                                     ।।೬।।
*******