Showing posts with label ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ vijaya vittala. Show all posts
Showing posts with label ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ vijaya vittala. Show all posts

Thursday, 17 October 2019

ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ankita vijaya vittala

ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ

ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ
ಕೋಪ ಕಾಮಾದಿಗಳು ವೆಗ್ಗಳಿಸಲಿ
ಪಾಪದ ರಾಶಿಗಳು ಬಂದು ಬೆನ್ನಟ್ಟಲಿ
ಶ್ರೀಪತಿ ನಿನ ಪಾದವನು ಬಿಡಬಲ್ಲನೆ 1

ಬಟ್ಟೆ ಅತಿ ಕಠಿಣವಾಗಲಿ
ಯಮನಾಳು ಬಲು ಭಯಂಕರರಾಗಲಿ
ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ
ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ2

ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು
ಏಕವಾಗಿ ಎನಗೆ ಬರಲಿ ಇಂದೆ
ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ
ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ3
**********