Showing posts with label ಶ್ರೀರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ gurumahipati. Show all posts
Showing posts with label ಶ್ರೀರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ gurumahipati. Show all posts

Wednesday, 1 September 2021

ಶ್ರೀರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ 


ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 

ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 

ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 

ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 

ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 

ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 

ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 

ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 

ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9

***