Showing posts with label ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ gurumahipati. Show all posts
Showing posts with label ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ gurumahipati. Show all posts

Wednesday, 1 September 2021

ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 

ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 

ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 

ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 

ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5

***