Showing posts with label ನೋಡಿದೆ ನೋಡಿದೆ ಪಾರ್ವಟೆ ಉತ್ಸವವ ಪಾರ್ವಟೆ ಉತ್ಸವಗೀತೆ venkatakrishna. Show all posts
Showing posts with label ನೋಡಿದೆ ನೋಡಿದೆ ಪಾರ್ವಟೆ ಉತ್ಸವವ ಪಾರ್ವಟೆ ಉತ್ಸವಗೀತೆ venkatakrishna. Show all posts

Tuesday, 1 June 2021

ನೋಡಿದೆ ನೋಡಿದೆ ಪಾರ್ವಟೆ ಉತ್ಸವವ ಪಾರ್ವಟೆ ಉತ್ಸವಗೀತೆ ankita venkatakrishna

ಪಾರ್ವಟೆ ಉತ್ಸವಗೀತೆ

ನೋಡಿದೆ ನೋಡಿದೆ ಪಾರ್ವಟೆ ಉತ್ಸವವ

ರೂಢಿಗೊಡೆಯ ರಂಗನ ಪರಮಸಂಭ್ರಮವ ಪ.


ಮುದದಿ ವಿಜಯದಶಮಿಯಲಿ ಭುಜಗಶಯನ ರಂಗ

ವಿಧವಿಧವಾದ ಆಭರಣ ವಸ್ತ್ರಗ[ಳಿಂದ]

ಮದನನಯ್ಯನು ತಾನು ಶೃಂಗಾರವಾಗಿ

ಒದಗಿ ಪಲ್ಲಕ್ಕಿ ಏರಿ ಬರುವ ವೈಭೋಗವ 1


ಮುತ್ತಿನಕಿರೀಟ ಮುಗುಳುನಗೆಯ ನೋಟ

ರತ್ನದ ಪದಕಗಳ ಹತ್ತುಅಳವಟ್ಟು ಬಟ್ಟಲಲಿ

ಭಕ್ತರು ಬಿಟ್ಟ ಉಭಯವನ್ನೆಲ್ಲ ಗ್ರಹಿ

ಸುತ್ತ ನರಸಿಂಹನಪುರದ ಮಂಟಪದಲ್ಲಿ 2


ಅಂಬುಮಾಲೆ ಆನೆಮೇಲೆ ನೇಮದಿಂದಲೆ ತಂದು

ನೀಲವರ್ಣಗೆ ಕೊಡಲು ಪೂಜೆಯನು ಮಾಡಿ

ನಾಲ್ಕುದಿಕ್ಕಿಗೆ ಅಂಬು ನಾಗಶಯನ ಬಹರಿನೇರಿ

ಲೀಲೆಯಿಂದ ಬರುವ ಪರಮವೈಭೋಗವ 3


ಶರಧಿಯಂತೆ ಪುರುಷೆ ಭೋರ್ಗರೆಯುತ ಬರುತಿರೆ

ಮುರುಜ ಮೃದಂಗ ಭೇರಿವಾದ್ಯ ಘೋಷಗಳು

ಗರುಡಮಂಟಪದಲ್ಲಿ ಗಜ ಸಿಂಹ ವೃಷಭ

ಶಾರ್ದೂಲನಡೆಯಿಂದ ಬಂದ ವಸುದೇವಪುತ್ರನ 4


ಬಂದು ಅಶ್ವವನಿಳಿದು ಅರ್ಥಿಯಿಂದಲೆ

ನಿಂದು ಗಾಯಿತ್ರಿಮಂಟಪದಲ್ಲಿ ಮಿತ್ರರು ಸಹಿತ

ಮಿಂದು ಮಡಿಯನಟ್ಟು ಇಂದಿರೆ ಸಹಿತಲೆ

ನಿಂದ ವೆಂಕಟರಂಗ ಮಂದಿರದೊಳಗೆ 5

***