Showing posts with label ಪಾದ ನಂಬೋ ಸಿದ್ಧಾಂತ ಸಾರವ jagannatha vittala. Show all posts
Showing posts with label ಪಾದ ನಂಬೋ ಸಿದ್ಧಾಂತ ಸಾರವ jagannatha vittala. Show all posts

Saturday, 14 December 2019

ಪಾದ ನಂಬೋ ಸಿದ್ಧಾಂತ ಸಾರವ ankita jagannatha vittala

ಜಗನ್ನಾಥದಾಸರು
ಪಾದ ನಂಬೋ
ಸಿದ್ಧಾಂತ ಸಾರವ ಹೃದಯದಿ ತುಂಬೋ ಪ

ಶತಕೋಟಿ ಜನ್ಮ ಸುಕೃತದಿ
ಅತುಳ ವೈಷ್ಣವಜನ್ಮ ದೊರಕಿತು ನಿಜದಿ
ಪಾದ ರಜದಿ ಮುಣುಗುತ
ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ 1

ಈತನ ವಾಕ್ಯವೆ ವೇದವಾಕ್ಯಗಳೆಂದರಿಯೊ
ಜಿಷ್ಣು ಸರ್ವೇಶ ಧಾತೃಗಳೊಂದೆಂಬ ದು
ರ್ವಾದಿ ದುರ್ಗಜಕೆ ಕೇಸರಿಯಾಗಿರುವ 2

ವಟು ವೃಷ್ಟಿವಂಶ ಲಲಾಮ
ತಟಿತಾಭ ಜಗನ್ನಾಥ ವಿಠಲಗೆ ಪ್ರೇಮಾ
ಸ್ಫುಟರೂಪತ್ರಯನೆ ನಿಷ್ಕಾಮಾ ನಿ
ಷ್ಕುಟಿಲ ಭಾರತಿರಮಣ ಹನುಮಂತ ಭೀಮ 3
********