..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಪುರಂದರದಾಸರು
ಶರಣು ಪುರಂದರ ದಾಸರಾಯರೆ ಶರಣು ಶರಣು ದಯಾನಿಧೆ
ಶರಣು ವ್ಯಾಸಮುನೀಂದ್ರ ಪ್ರಿಯತಮ ಶರಣು ಮನ್ಮನೋಭೀಷ್ಟದ ಪ.
ಜ್ಞಾನಭಕ್ತಿವೈರಾಗ್ಯ ಶಮದಮ
ಗುಣಗಣಾದಿ ಸಂಪನ್ನ ನೀ
ಹೀನ ವಿಷಯಗಳಲ್ಲಿ ರತನು
ಬೂಟಕನು ಗುಣಹೀನ ನಾ 1
ನಿನ್ನ ಸುಸ್ವಭಾವವಾದ ಔ
ದಾರ್ಯಗುಣದಿಂದ ಎನ್ನನ್ನು
ಇನ್ನು ಮುಂದೆ ಕೊರತೆ ಸರ್ವವ
ಪರಿಹರಿಸಿ ಪಾಲಿಸೋ 2
ಶ್ರೀ ಪುರಂದರ ವಿಜಯ ವಿಠ್ಠಲ
ಗೋಪಾಲ ಕಪಿಲ ಶ್ರೀಶಗೆ
ಪುಷ್ಪ ಜನಪಿತÀ ಶ್ರೀ ಪ್ರಸನ್ನ
ಶ್ರೀನಿವಾಸಗೆ ಪ್ರಿಯತಮ 3
***