Showing posts with label ಸ್ಮರಿಸಿ ಬೇಡುವೆ ಗುರುವರರ ಪಾದ ಸರಸಿಜ ಸ್ಮರಿಪ kamalanabha vittala. Show all posts
Showing posts with label ಸ್ಮರಿಸಿ ಬೇಡುವೆ ಗುರುವರರ ಪಾದ ಸರಸಿಜ ಸ್ಮರಿಪ kamalanabha vittala. Show all posts

Thursday, 5 August 2021

ಸ್ಮರಿಸಿ ಬೇಡುವೆ ಗುರುವರರ ಪಾದ ಸರಸಿಜ ಸ್ಮರಿಪ ankita kamalanabha vittala

 ..

kruti by Nidaguruki Jeevubai


ಸ್ಮರಿಸಿ ಬೇಡುವೆ ಗುರುವರರ ಪಾದ-

ಸರಸಿಜ ಸ್ಮರಿಪರಘುಪರಿಹರಿಸುವರಪ


ಇಂದಿರೇಶನ ಮಹಿಮೆ ಬಲ್ಲ ಭಕ್ತ

ಸಂದಣಿಯೊಳು ಇವರಿಗೆ ಸಮರಿಲ್ಲ

ತಂದೆ ವೆಂಕಟೇಶ ವಿಠ್ಠಲನೆಂದು

ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1


ಸಿರಿವೆಂಕಟೇಶನ್ನ ಸ್ಮರಿಸಿ ಬಹು

ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ

ಗಿರಿಯ ವೆಂಕಟನನ್ನು ಭಜಿಸಿ ನಮ್ಮ

ಉರಗಾದ್ರಿವಾಸ ವಿಠ್ಠಲದಾಸರೆನಿಸಿ2


ಸದ್ವೈಷ್ಣವರ ಸುರಧೇನು ಸರ್ವ

ರುದ್ಧಾರವಾಗಲು ಜನಿಸಿದರಿನ್ನು

ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ

ಮುದ್ದು ಮೋಹನ್ನ ವಿಠ್ಠಲದಾಸರನ್ನು 3


ಸುಂದರ ಮೂರ್ತಿಯ ತಂದು ದುರ್ಗ

ಮಂದಿರದಲಿ ಸ್ಥಾಪಿಸಿದರೊ ಅಂದು

ಛಂದದಿ ಸೇವಿಸಿರೆಂದು ಶಿಷ್ಯ

ಮಂಡಲಿಗಳಿಗೆ ಬೋಧಿಸಿದರೆಂತೆಂದು 4


ಕಳವಳ ಪಡುತಿಹೆನಲ್ಲ ಕಾಲ

ಕಳೆದು ಹೋಗುತಲಿದೆ ಅರಿವು ಬರಲಿಲ್ಲ

ಪರಮ ಭಕ್ತರ ಪರಿಯನೆಲ್ಲ 

ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5

***