Showing posts with label ಕಾಣದೆ ಇರಲಾರೆ ದೇವ ಮುಖ್ಯಪ್ರಾಣ prasannavenkata. Show all posts
Showing posts with label ಕಾಣದೆ ಇರಲಾರೆ ದೇವ ಮುಖ್ಯಪ್ರಾಣ prasannavenkata. Show all posts

Monday, 11 November 2019

ಕಾಣದೆ ಇರಲಾರೆ ದೇವ ಮುಖ್ಯಪ್ರಾಣ ankita prasannavenkata

by ಪ್ರಸನ್ನವೆಂಕಟದಾಸರು
ಕಾಣದೆ ಇರಲಾರೆ ದೇವ ಮುಖ್ಯಪ್ರಾಣ ಮನೋಹರ ದೇವ ನಿನ್ನವಾಣಿಯಲಮೃತವನೂಡೊ ಕಡೆಗಾಣಿಸಿ ಪದದೆಡೆಯಲ್ಲಿಡೊ ಪ.

ಹಿಡಿಯಲು ಮರದಾಸೆಯಿಲ್ಲ ಕುಳಿತಡೆ ಪೊಡವಿಲಿ ದೃಢವಿಲ್ಲ ನಿನ್ನೊಡಲೊಳಗಿಡಬಹುದೆನ್ನ ನನ್ನೊಡೆಯ ಕರುಣಾರಸಪೂರ್ಣ 1

ನಿಲಗುಡವರಿಯಾರು ವರ್ಗ ಬಲುಬಳಲಿಪ ಮೂರುಪಸರ್ಗ ಇದರೊಳಗೆ ನಿನ್ನಯ ಶುಭನಾಮ ಒಂದೆಬಲಿಕ್ಯಾಗಿರಲಿ ಪೂರ್ಣಕಾಮ 2

ಚಿನ್ಮಯ ಸುಗುಣದ ಖಣಿಯೆ ಸಲಹೆನ್ನನಿರ್ಜರಚಿಂತಾಮಣಿಯೆ ಬಿಡದೆನ್ನ ಮನದೊಳಗೆ ಬೆರೆಯೊ ಪ್ರಸನ್ವೆಂಕಟ ಗಿರಿದೊರೆಯೆ 3
*******