Showing posts with label ಶ್ರೀಶ ಬ್ರಹ್ಮ ಸದಾಶಿವಾದಿ jagannatha vittala. Show all posts
Showing posts with label ಶ್ರೀಶ ಬ್ರಹ್ಮ ಸದಾಶಿವಾದಿ jagannatha vittala. Show all posts

Saturday, 14 December 2019

ಶ್ರೀಶ ಬ್ರಹ್ಮ ಸದಾಶಿವಾದಿ ankita jagannatha vittala

ಜಗನ್ನಾಥದಾಸರು
ಶ್ರೀಶ ಬ್ರಹ್ಮ ಸದಾಶಿವಾದಿ ಸುರಾರ್ಚಿತ ದಾಶರಥಿ ತವ
ದಾಸರೊಳಗಿಟ್ಟು ನೀ ಸಲಹೊ ವಿಷಯಾಶೆಗಳ ಬಿಡಿಸಿ ಪ

ಲೋಕನೀಯ ವಿಶೋಕ ಭಕ್ತರ
ಶೋಕ ಮೋಹವ ನೀ ಕಳೆದು ಸುಖ
ವೇ ಕರುಣಿಸು ಕೃಪಕಟಾಕ್ಷದಿ ಅಕೂತಿತನಯ
ವಾಕುಮನ್ನಿಸನೇಕ ಮಹಿಮ ವಿ
ವೇಕ ಬುದ್ದಿಯ ನೀ ಕೊಡೆನೆಗೆ ಪಿ
ನಾಕಿಸುತ ಪರಲೋಕದಾಯಕ
ಲೌಕಿಕವ ಬಿಡಿಸೊ1

ವೈರಿವರ್ಗಗಳಾರು ಇಂದ್ರಿಯ
ದ್ವಾರದೊಳು ಪೊಕ್ಕು ಚಾರುಧರ್ಮದ
ದಾರಿ ಮನಸಿಗೆ ತೋರ ಗೊಡದಲೆ
ನಾರಿ ಧರಣಿ ಧನಾ ಹಾರಯಿಸುತಿದ್ದು
ಘೋರಿಸುತಿವೆ ಮುರಾರಿ ತವಚರ
ಣಾರವಿಂದವ ತೋರಿ ಮನದಿ ಸಂ
ಸಾರ ಶರಧಿಯ ತಾರಿಸನುದಿನ2

ತರಣಿ ನವ
ಪೋತ ಕಾಲವ ಭೀತಿ ಬಿಡಿಸು ಪುರು
ಹೂತನ ಪ್ರಿಯ ಮಾತುಳಾಂತಕ
ಮಾತುಗಳನೆ ಮನ್ನಿಸಿ
ಶ್ವೇತವಾಹನ ಸೂತಸುಖಮಯ
ವಾತಪಿತ ಜಗನ್ನಾಥವಿಠ್ಠಲ
ಪಾತಕಾರಣ್ಯ ವೀತಿಹೋತ್ರ ನಾ ತುತಿಪೆನೆ ನಿನ್ನಾ 3
*********