RAO COLLECTIONS SONGS refer remember refresh render DEVARANAMA
..
ಕುಂದಣದಾರುತಿ ತಾರೆ ಕುಂದಣದಾರುತಿ |
ಸುಂದರವದನ ಕಮಲನಾಭನಿಗೀಗ ಪ
ಶೌರಿ ಸುರವಂದ್ಯಗೆ ವಾರಿಧಿಶಯನಗೆ |
ಮುರವೈರಿ ಮದನಪಿತನಿಗೀಗ 1
ಮುಕ್ತಿ ಶುಭದಾತಗೆ | ಭಕ್ತರ ಪರಿಪಾಲಗೆ |
ಲಕುಮೀಶಗೆ ಶುಭದಿ ಪೋಷಗೆ 2
ಶಾಮಸುಂದರಾಂಗಗೆ ಸಾಮಜೇಂದ್ರ ಪಾಲಗೆ
ಸುಮನಯನ ಶಮಲದೂರಗೀಗ 3
***