ಎಷ್ಟು ಭಾಗ್ಯ ಎಷ್ಟು ಭಾಗ್ಯಕೃಷ್ಣನ ಮುಖವ
ದಿಟ್ಟಿಸಿ ನೋಡಿ ಸುಖಿಸುವ ಸಭೆಯ ಜನರು ಪ.
ಕಡಗ ಸರಪಳಿಯು ದಿವ್ಯ ಬೆಡಗಿನಾಭರಣಮುಕುಟ ಕಡಿಗಂಟೆ ಮುತ್ತುಗಳ ಜಡವುತಕಡಿಗಂಟೆ ಮುತ್ತುಗಳ ಜಡವುತಲಿ ರಂಗನಾಯಕನ ಎಡಬಲದಿ ಕುಳಿತ ಅರಸಿಯರು ಸಖಿಯೆ 1
ಕೆತ್ತಿಗೆ ಕುಸುರಾದ ಉತ್ತಮ ಆಭರಣಗಳುಮುತ್ತಿನ ಮಾಲೆಗಳು ಅಲಗುತಮುತ್ತಿನ ಮಾಲೆಗಳು ಅಲಗುತ ರಂಗಯ್ಯನ ಹತ್ತಿರ ಕುಳಿತ ದೊರೆಗಳು ಸಖಿಯೆ2
ಕುಂಡಲ ಮಂಡಿತ ಪಂಡಿತರೆಲ್ಲರುಭೂಮಂಡಲ ಪತಿಯ ಸ್ತುತಿಸುತ ಭೂಮಂಡಲ ಪತಿಯ ಸ್ತುತಿಸುತ ಸಭೆಯಲಿತಂಡ ತಂಡದಿ ಕುಳಿತಾರೆ ಸಖಿಯೆ 3
ಋಗ್ವೇದಾದಿಗಳೆಲ್ಲರು ಶಬ್ದವಾದದಿಂದಲಿರುಕ್ಮಿಣಿ ಪತಿಯ ಸ್ತುತಿಸುತರುಕ್ಮಿಣಿ ಪತಿಯನೆ ಸ್ತುತಿಸುತ ಸಭೆಯಲಿಹಿಗ್ಗಿ ಹರುಷದಲಿ ಕುಳಿತಾರೆ ಸಖಿಯೆ 4
ಮಿಂಚು ಮಡಿಯುಟ್ಟು ಪಂಚ ಮುದ್ರೆಯನೆ ಧರಿಸಿ ಚಂಚಲಾಕ್ಷನ ಸಭೆಯೊಳು ಚಂಚಲಾಕ್ಷನ ಸಭೆಯೊಳು ಜೋಯಿಸರುಪಂಚಾಂಗ ಹೇಳುತ ಕುಳಿತಾರೆ ಸಖಿಯೆ 5
ತಾಳ ಮದ್ದಳೆ ದಿವ್ಯ ಮೇಲೆ ತಂಬೂರಿಯವರು ಮೇಲು ಸ್ವರದಿಂದ ಸಭೆಯೊಳುಮೇಲು ಸ್ವರದಿಂದ ನುಡಿಸುತ ಕುಳಿತಾರೆ ಕಾಳಿ ಮರ್ದನನ ಸಭೆಯೊಳು ಸಖಿಯೆ 6
ಚಲುವ ರಾಮೇಶನ ಆದರದಿ ಸ್ತುತಿಸುತಲೆವೇದಗೋಚರನ ಸಭೆಯೊಳು ವೇದಗೋಚರನ ಸಭೆಯೊಳಗೆ ಹರುಷದಿಯಾದವರೆಲ್ಲ ಕುಳಿತಾರೆ ಸಖಿಯೆ 7
****