ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನವಿಲ್ಲದೆ ಬಾಳೂದೊಂದು ಸಾಧನವೆ ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಪ
ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ ಕಣ್ಣದೆರೆದು ಖೂನಗಾಣಲಿಲ್ಲ ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ 1
ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ ಸಮದೃಷ್ಟಿಯಲಿ ಜನವರಿಯಲಿಲ್ಲ ಸಮರಸವಾಗಿ ಸದ್ಛನವ ನೋಡಲಿಲ್ಲ ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ2
ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ ಗುರುತಿಟ್ಟು ನೋಡಿಕೊಂಡವನೇ ಬಲ್ಲ ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ 3
****