Showing posts with label ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ vijaya vittala DEVARA DEVA NINNA BALAVALLADE MATTE AAVA GRAHAGALINDALI. Show all posts
Showing posts with label ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ vijaya vittala DEVARA DEVA NINNA BALAVALLADE MATTE AAVA GRAHAGALINDALI. Show all posts

Monday, 8 November 2021

ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ankita vijaya vittala DEVARA DEVA NINNA BALAVALLADE MATTE AAVA GRAHAGALINDALI

ರಾಗ ಮಧುವಂತಿ

ದೇವರ ದೇವ ನಿನ್ನ ಬಲವಲ್ಲದೆ ಮತ್ತೆ
ಆವ ಗ್ರಹಗಳಿಂದಲಿ ಉಂಟು ಎನಗೆ ಪ

ಇಂದು ಬಲವೊ ಅರ
ಅರ್ಕ ಬಲವು
ವಂದನ ಗೈದು ಮಂತ್ರಿ ಬಲವೋ ಎನಗೆ
ನಿಂದು ಕೊಂಡಾಡುವದು ಕಾವ್ಯ ಬಲವೊ 1

ಆರಾಧನೆ ಮಾಡುವುದು ಅಂಗಾರಕನ ಬಲವೊ
ಸಾರಿ ಪೇಳುವದೆನಗೆ ಸೌಮ್ಯ ಬಲವೊ
ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ
ಹಾರೈಸಿ ಹಿಗ್ಗುವದು ರಾಹು ಬಲವೊ 2

ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ
ವಾಲಗ ಮಾಡುವದು ತಾರಾಬಲವೊ
ಸಿರಿ ವಿಜಯವಿಠ್ಠಲ ನಿನ್ನ
ಆಳಾಗಿ ಬಾಳುವದು ಸರ್ವಬಲವು 3
***