Showing posts with label ಏನು ಕಾರಣ ಕೃಷ್ಣಾ ಏನು ಕಾರಣ indiresha. Show all posts
Showing posts with label ಏನು ಕಾರಣ ಕೃಷ್ಣಾ ಏನು ಕಾರಣ indiresha. Show all posts

Saturday, 28 December 2019

ಏನು ಕಾರಣ ಕೃಷ್ಣಾ ಏನು ಕಾರಣ ankita indiresha

ಏನು ಕಾರಣ ಕೃಷ್ಣಾ ಏನು ಕಾರಣ ಪ

ಏನು ಕಾರಣ ಎನ್ನ ಕಣ್ಣಿಗೆ ನೀನು ತೋರದಿರುವುದು ಇದು ಅ.ಪ
ಖಗ ಮೃಗಾದಿಗಳಿಗೆ ನೀನು ರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು 1

ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಮೆನೋವಾ 2

ಮುರಲಿನೂದಿ ವನದಿ ಹರಿಯುತರುಲತಾದಿಗಳಿಗೆ ದರ್ಶನವಿತ್ತು ಕಾಯ್ದುಅದಕು ಪರಮ ಪುರುಷ ಕಡಿಮೆ ನೋವಾ3

ಹಾದಿಲ್ಹೋಗೋ ಕೀಟನಿಗೆವೇದನಾಥ ದರುಶನಿತ್ತಿಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ 4

ಎಷ್ಟು ಎಷ್ಟು ಜನರಿಗೀಗಭೆಟ್ಟಿ ನೀಡಿ ಸುಖವನಿತ್ತೆಶ್ರೇಷ್ಠನೆಂದು ಸ್ತುತಿಪೆ ನಿನ್ನ ಕೃಷ್ಣ ಕರುಣಿ ಬೇಗನೆ ಬಾ 5

ಇಂಥಾ ಜನುಮದಲ್ಲಿ ನಿನ್ನಕಂತು ಪಿತನೆ ಕಾಣದಿರಲುಪಂಥಗಾಣೆ ಮುಂದಿನ ತನುಎಂಥದಾಗುವುದೋ ತಿಳಿಯೆ 6

ಇಂದಿರೇಶ ಮುರಲಿ ಶೋಭಿತಇಂದು ಬಿಂಬ ವಿಜಯ ವದನತಂದು ತೋರಿಸೆನ್ನ ಮನಕಾ-ನಂದಿಸೀಗ ನಂದನಸುತ 7
**********