..
kruti by ವರದೇಶ ವಿಠಲರು varadesha vittala dasaru
ಶ್ರೀ ವರದೇಂದ್ರನಿಗೆ ನಮೋ ನಮೋ ಕೋವಿದ
ವಂದ್ಯಗೆ ನಮೋ ನಮೋ
ಸೇವಿಪ ಜನರ ಕೃಪಾವಲೋಕನದಿ ಕಾವಕರುಣಿಗೆ
ನಮೋ ನಮೋ ಪ
ದೇಶಿಕವರ್ಯಗೆ ನಮೋ ನಮೋ
ದೋಷವಿದೂರಿಗೆ ನಮೋ ನಮೋ
ಕಾಷಾಯ ಕಮಂಡಲ ಧಾರಗೆ ನಮೋ
ಭಾಸುರ ಚರಿತಗೆ ನಮೋ ನಮೋ 1
ವಸುಧೀಂದ್ರರ ಕರಜಾತನಿಗೆ
ವಸುದಿಜೀವರ ಸಂಪ್ರೀತನಿಗೆ
ದಶದಿಶೆಯೊಳು ವಿಖ್ಯಾತನಿಗೆ
ಕಸವರಭಾಂಗ ಪ್ರಖ್ಯಾತನಿಗೆ 2
ಮರುತ ಮತಾಂಬುಧಿ ಸೋಮನಿಗೆ
ಪರಮತ ತಿಮಿರ ತರಣಿ ನಿಭಗೆ
ವರದೇಶ ವಿಠಲನ ಸ್ಮರಿಸುತ ಲಿಂಗಸು -
ಗುರುಸುಕ್ಷೇತ್ರ ನಿವಾಸನಿಗೆ 3
***