by ನಿಡಗುರುಕಿ ಜೀವೂಬಾಯಿ
ಎಂತು ಶೋಭಿಸುತಿಹಳು ಈ ಕನ್ನಿಕೆ
ಸಂತೋಷದಿಂದಲಿಸುರರುಸ್ತುತಿಸುತಿರಲುಪ
ಮಂಧರಗಿರಿ ತಂದು ಸಿಂಧುವಿನೊಳಗಿಟ್ಟುಚಂದದಿಂ ಮಥಿಸಲಮೃತ ಪುಟ್ಟಲುಬಂದು ದಾನವರ ಪಹರಿಸಬೇಕೆನುತಿರಲುನಿಂದರುಸುರರುಮುಂದೋರದೆ ಚಿಂತಿಸೆಇಂದಿರಾಪತಿ ಇವರ ಭಾವವಕಂಡುಮನದಲಿ ಹರುಷಪಡುತಲಿಬಂದು ಅಸುರರ ಸುರರ ಮನ್ನಿಸಿನಿಂದ ಶ್ರೀ ಗೋವಿಂದ ಮುದದಲಿ 1
ಸಾಲಾಗಿ ಕುಳಿತಿರಿ ಮೇಲಾದಮೃತವನ್ನುಲೀಲೆಯಿಂದಲಿ ಬಡಿಸುವೆನೆನ್ನಲುಕೇಳಿಅಸುರರು ಹರುಷತಾಳಿ ಸಂಭ್ರಮದಿಂದಸಾಲಾಗಿ ಕುಳಿತು ಆ ವೇಳೆ ನೋಡುತಲಿರಲುಶ್ರೀ ರಮಣ ಕರದಲ್ಲಿ ಕಲಶವÀಲೀಲೆಯಿಂದಲಿ ಪಿಡಿದು ನಿಲ್ಲಲುತಾಳಿ ಹರುಷವ ದಾನವರು ಸÀು-ಮ್ಮಾನದಿಂದಲಿ ನೋಡÀುತಿಹರು 2
ಗಂಗೆಯ ಪಡೆದ ಪಾದಗಳ ಶೃಂಗಾರಅಂದಿಗೆ ಕಿರುಗೆಜ್ಹೆ ಸರಪಣಿಯುಚಂದುಳ್ಳ ಬೆರಳುಗಳಿಗೆ ಪಿಲ್ಲಿ ಕಿರುಪಿಲ್ಲಿ ಕಾ-ಲುಂಗರಗಳನಿಟ್ಟು ರಂಭೆಯಂತ್ಹೊಳೆಯಲುಬಂದಿ ಬಾಪುರಿ ಥಳಥಳಿಸುತಲಿಚಂದದನಾಗಮುರಿಗಿ ತಾಯಿತಸುಂದರಹಸ್ತಕಡಗ ಹಾಸರಇಂದಿರಾಕ್ಷಿ ಕೈ ಬಳೆಗಳ್ಹೊಳೆಯುತ 3
ಹಲವು ಸೂರ್ಯರ ಕಾಂತಿ ಹೊಳೆವೊ ಪೀತಾಂಬರಸರಿಗೆ ಅಂಚಿನ ಕುಪ್ಪುಸವನೇ ತೊಟ್ಟುನಡುವಿಗೆ ನವರತ್ನ ಬಿಗಿದ ಪಟ್ಟೆಯನಿಟ್ಟುಸಡಗರದಲಿ ಆಣೆಮುತ್ತಿನ ಸರಗಳುಸರಗಿ ಏಕಾವಳಿಯು ವಜ್ರದಪದಕಗಳು ಥಳಕೆಂಬ ಸರಗಳುಕೊರಳ ಗೆಜ್ಜೆಟ್ಟಿಕೆಯು ಕಂಠಿಯುಮುರಳಿಸರ ಕಠ್ಠಾಣಿವಲಿಯುತ 4
ಹೊಳೆವೊಗಲ್ಲಕೆ ಥಳಥಳಿಪ ಅರಿಶಿನಹಚ್ಚಿಹೊಳೆವೊ ಮೀನ್ ಬಾವುಲಿ ಕರ್ಣದಲಿಗಿಳಿಗೆಜ್ಜೆ ಚಳತುಂಬು ಬುಗುಡಿ ಬಾವುಲಿ ಚಂದ್ರಮುರುವುಸರಪಳಿಗಳು ಥಳಥಳ ಹೊಳೆಯಲುಆಣಿಮುತ್ತಿನ ಮುಖುರ ಬೇಸರಿಜಾಣೆ ನಾಶಿಕದಲ್ಲಿ ಹೊಳೆವ ಬು-ಲಾಕುನಿಟ್ಟಿ ಬೆಳಕು ಗಲ್ಲದಮೇಲೆ ಥಳಥಳ ಹೊಳೆವ ಕಾಂಚಿಯು 5
ಸಣ್ಣ ಬೈತಲೆ ಬಟ್ಟು ಚಂದ್ರ ಸೂರ್ಯರ ನಿಟ್ಟುಹಿಂದೆ ಜಡೆಬಿಲ್ಲೆ ಗೊಂಡ್ಯಗಳನಿಟ್ಟುಚಂದ್ರ ಸೂರ್ಯರ ಪೋಲ್ವ ಚೌರಿ ರಾಗಟಿ ಜಡೆಬಂಗಾರ ಹೊಳೆಯುತ್ತ ಬಡನಡು ಬಳಕುತ್ತಕಂಗಳ ಕಡೆನೋಟದಿಂದಲಿಭಂಗಪಡಿಸುತ ಅಸುರ ಕೋಟಿಯಮಂದಗಮನದಿ ಅಡಿಯನಿಡುತಲಿಬಂದಳಮೃತದ ಕಲಶ ಪಿಡಿಯುತ 6
ಕಂಗಳುಮುಚ್ಚಿ ಕುಳಿತಿರಲು ದಾನವ ಪಂಕ್ತಿಮುಂದೆ ಕಾಲ್ಗೆಜ್ಜೆ ಧ್ವನಿಯ ಮಾಡುತಅಂದಿಗೆ ಸರಪಣಿನಾದ ತುಂಬಲು ಭರದಿಸುಂದರಿ ಬಂದಿಹಳೆÀಂದು ದಾನವರೆಲ್ಲಮಂದಹಾಸದಿ ಮೈಮರೆತು ಮತ್ತೊಂದು ತೋರದೆ ಕಳವಳಿಸುತಲಿರೆಇಂದಿರೇಶನು ದೇವೆತೆಗಳಿಗೆಪೊಂದಿಸಿದ ಅಮೃತವನು ಹರುಷದಿ 7
ಕಲಕಲಕೂಗುತ ಕಲಹಕೆನ್ನುತ ಬರೆಬಲವು ಸಾಲದೆ ಹಿಂದಿರುಗಲವರುಸುರರುಪುಷ್ಪದ ಮಳೆಕರೆದರು ದೇವನವರಋಷಿಗಳು ನೆರೆದು ಸ್ತುತಿಸಿ ಕೊಂಡಾಡಲುಪರಮಪುರುಷನೆ ಪುಣ್ಯಚರಿತನೆಗರುಡ ಗಮನನೆ ಉರಗಶಯನನೆಸರಸಿಜಾಕ್ಷನೆ ನಮಿಪೆವೆನ್ನುತಸನಕಾದಿಗಳು ಸಂಸ್ತುತಿಸೆ ದೇವನ 8
ಪರಶಿವನಿದ ನೋಡಿ ಪರಿಪರಿ ಪ್ರಾರ್ಥಿಸಿತರುಣಿಯ ರೂಪವ ನೋಡಲನುವಾಗಲುಸರಸಿಜಾಕ್ಷನ ಸ್ತ್ರೀರೂಪ ನೋಡುತಲಿ ಮೈಮರೆದು ಕೈಮುಗಿದು ಕೊಂಡಾಡಿ ಸುತ್ತಿಸಿದನುಮರಳಿ ಭಸ್ಮಾಸುರನ ಭಾಧೆಗೆತರಹರಿಸಿ ಮುಂದೋರದಿರುವಸಮಯದಲಿ ಸ್ತ್ರೀರೂಪ ತಾಳುವತ್ವರದಿ ರಕ್ಷಿಸಿ ಪೊರೆದ ದೇವನು 9
ಕಮಲಸಂಭವನಯ್ಯಕಮಲಜಾತೆಯ ಪ್ರಿಯಕಮಲಾಕ್ಷಕಂಸಾರಿಕರುಣಾನಿಧೆಶರಣು ಶರಣೆನ್ನುತ ನಭವ ತುಂಬಲು ಸ್ವರಸುರಗಂಧರ್ವರು ಪಾಡಿಪೊಗಳುತಿಹರೊ ದೇವಕನಕಗರ್ಭನ ಪಿತನೆ ರಕ್ಷಿಸುಕಮಲನಾಭ ವಿಠ್ಠಲನೆ ನಮಿಸುವೆಸವಿನಯದಿ ನಿನ್ನ ಸ್ತುತಿಪ ಭಾಗ್ಯವಕರುಣಿಸೆನಗೆ ಶ್ರೀ ಕರುಣಾನಿಧಿಯೆ 10
********