..
kruti by Srida Vittala Dasaru Karjagi Dasappa
ಆಡ ಹೋಗುವಾ ಬಾರೊ ರಂಗಾ ಪ
ಆಡ ಹೋಗುವಾ ಬಾರೊ ರಂಗಾ
ಕೂಡಿ ಕಾಳಿಂದೀ ತೀರದಲ್ಲಿ
ನಾಡ ಗೊಲ್ಲರ ಹೆಂಗಳಿಗೆಲ್ಲ
ಬೇಡಿದಿಷ್ಟಾರ್ಥಗಳ ಕೊಡುವಾ ಅ.ಪ.
ಆಣಿಕಲ್ಲು ಗೋಲಿ ಗಜ್ಜುಗ
ಚಿಣ್ಣಿಕೋಲು ಚಂಡು ಬುಗುರಿ
ಕಣ್ಣುಮುಚ್ಚಾಲೆ ಕುಂಟಹಲಿಪೆ
ಬಣ್ಣ ಬಣ್ಣದಾಟಗಳನು 1
ಸೋಲುಗೆಲವಿಗೆಲ್ಲ ನೀನೆ
ಪಾಲುಗಾರನಾಗಿ ನಮ್ಮ
ಮೇಲೆ ಮಮತೆ ಇಟ್ಟು ಸಾನು -
ಕೂಲನಾಗಿ ಕೈಯ್ಯ ಪಿಡಿಯೋ2
ಮೆಟ್ಟು ಮೆಟ್ಟು ಕೋಲು ಕೈಲಿ
ಕಟ್ಟು ಬುತ್ತಿ ಕೊಳಲು ಕಂಬಳಿ
ಧಿಟ್ಟ ಗೋವಳರಾಮ ಶ್ರೀದ -
ವಿಠಲಯ್ಯ ಯಾಕೆ ತಡವೋ3
***