ಹಿತದಿ ಜೀವಿಸು ಬಾಲೆ ಸುಮಂಗಲೆ
ಹಿತದಿ ಜೀವಿಸು ಬಾಲೆ ಪತಿಯ ಪ
ಸೇವಾನುಕೂಲೆ ಕ್ಷಿತಿಯೊಳಗೆ
ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ
ರತಿಪತಿಪಿತನಿಗೆ ಪ್ರತಿಮೆಗಳೆನಿಸುವ
ಅತಿಥಿಗಳ ಸಂತತ ಸುಶೇವಾ-
ರತಳು ಬಹು ಗುಣವತಿಯಳೆನಿಸುವ 1
ಗುರುಜನರಿಗೆ ಸದಾ ಶಿರಬಾಗಿ ನಡೆಯುತ
ಹರುಷದಲಿ ಹರನರಸಿಯಳ ಪದ
ಸರಸಿಜದಿ ಮನವಿರಿಸಿ ಪೂಜಿಸಿ 2
ಶರಣು ಜನಕೆ ಸುರತರುವೆನಿಪ ಕಾರ್ಪರ
ಸಿರಿಮನೋಹರ ನರಹರಿಯ ಶುಭ
ಚರಣಯುಗಲವ ಸ್ಮರಿಸುತನುದಿನ 3
****