Showing posts with label ಬಾರನ್ಯಾತಕೆ ವಾರಿಜಾನನೆ prasannavenkata. Show all posts
Showing posts with label ಬಾರನ್ಯಾತಕೆ ವಾರಿಜಾನನೆ prasannavenkata. Show all posts

Thursday, 14 November 2019

ಬಾರನ್ಯಾತಕೆ ವಾರಿಜಾನನೆ ankita prasannavenkata

by ಪ್ರಸನ್ನವೆಂಕಟದಾಸರು
ಬಾರನ್ಯಾತಕೆ ವಾರಿಜಾನನೆ ಶ್ರೀಮಾರಜನಕಸಕಲ ಸುಖಕೆ ಕಾರಣನು ಕರುಣಿಸಿ ತಾನೆ ಪ.

ಭುವನೇಶನಿನಿಯಳಣುಗ ತಾ ಪಿಡಿದು ಜರಿದ ಬಲಹಗೆಹ್ಯಾವಿಲೆಳೆದವನೊಳು ಕಾದಿ ತಾವೊಲಿದ ದೊರೆಯ ನಮಿಸಿಭಾವಕದಿದು ಇಷ್ಟವ ಪಡೆದನ ಜನನಿಸುತರಜೀವಕೆಡರು ಬರಲಿ ಕಳಿದನೆ ರಂಧ್ರ ಪೊಳಲದೇವ ಭಗಿನಿ ತುತಿಯ ಕೇಳ್ದನೆಇಂದುವದನೆ1

ಹರಿಪದಸ್ಥನೆರೆಯನಿಂದ ಹರುಷದೊರೆದ ಪುರುಷನುಗ್ರಕರಿಯ ಮೈಯು ಬರಲಿ ಕಳೆದ ನರಟುನುಳ್ಳವನು ಭುವಿಲಿಹರಗೊಲಿಸಿ ಎಬಡ ಗಡ ಹೆಣ್ಣಿನ ಒಡಲ ಪೊಡೆಯುಉರಿಯಲರಿದ ಸಿರಿಯವರದನೆ ಬಾಳರುಚಿಯುಳ್ಹರಿಯನಟ್ಟಿಜವದಿಕಾಯ್ದನೆಕುಂದರದನೆ2

ಭಾರಮಣನ ಅಗ್ರಜಳ ಕಿಶೋರಬಾಣಪ್ರಿಯಜನವತಾರನರಮನೆಗೊಲಿದು ವಿಷದ್ವಿಜನ್ನ ಧ್ವಜ ಕರೆದರೆಬಾರದೇನೆ ಮೂಗಮುರಿವನೆ ತನ್ನ ನಂಬಿಸಾರಿದವರ ಮನದೊಳಿರುವನೆ ಪ್ರಸನ್ನವೆಂಕಟಧೀರನೊಬ್ಬ ಜಗಕೆ ಚೆಲುವನೆ ಭಾಮಿನಿ 3
********