Showing posts with label ಸುಳಿದನ್ಯಾರೆ ಈಗ ಸುಳಿದನ್ಯಾರೆಕೆಳದಿ prasannavenkata. Show all posts
Showing posts with label ಸುಳಿದನ್ಯಾರೆ ಈಗ ಸುಳಿದನ್ಯಾರೆಕೆಳದಿ prasannavenkata. Show all posts

Monday, 18 November 2019

ಸುಳಿದನ್ಯಾರೆ ಈಗ ಸುಳಿದನ್ಯಾರೆಕೆಳದಿ ankita prasannavenkata

by ಪ್ರಸನ್ನವೆಂಕಟದಾಸರು
ಸುಳಿದನ್ಯಾರೆ ಈಗ ಸುಳಿದನ್ಯಾರೆಕೆಳದಿ ಎನ್ನುಪ್ಪರಿಗೆಯ ಮುಂದೆಹೊಳೆವ ಹೊಂಬಕ್ಕಿಯ ಮೇಲೆಥಳಥಳಿಪ ಮಿಂಚಿನಂತೆ ಪ.

ಎಸೆವಮಣಿಕನಕಾಭರಣಿಟ್ಟುನಸುನಗೆ ಬೆಳಗ ವೈಸರಿಸಿಬಿಸಜಾಕ್ಷಿಯಳೋರ್ವಳ ಕೂಡಹೊಸಪರಿಸರಸವಾಡುತಲಿ1

ಮುಂದುಗ್ಗಡಿಪ ಸುರಸಂದೋಹಹಿಂದಕ್ಕೆಳದಿ ಮುನಿಸಮ್ಮೋಹಅಂದದಿ ಮುಂಗಡಿರುವ ವಾದ್ಯಸಂದಣಿಯ ಸೊಬಗಿನಲ್ಲಿ 2

ಎನ್ನ ಮನದಿ ನೇಹವ ಬೀರಿಇನ್ನ್ಯಾಕೆ ದೂರ ನೋಡಿದನೆಮನ್ನಿಸ್ಯವನ ತಾರೆ ಶ್ರೀ ಪ್ರಸನ್ನವೆಂಕಟವರದನ ಬೇಗ 3
********