Showing posts with label ಬಾಲನ ನೋಡಿರೆನಿವಾಳಿಸಿಆಡಿರೆ prasannavenkata. Show all posts
Showing posts with label ಬಾಲನ ನೋಡಿರೆನಿವಾಳಿಸಿಆಡಿರೆ prasannavenkata. Show all posts

Thursday, 14 November 2019

ಬಾಲನ ನೋಡಿರೆನಿವಾಳಿಸಿಆಡಿರೆ ankita prasannavenkata

by ಪ್ರಸನ್ನವೆಂಕಟದಾಸರು
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.

ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1

ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2

ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3

ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4

ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5

ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6

ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
*******