Showing posts with label ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ vaikunta vittala. Show all posts
Showing posts with label ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ vaikunta vittala. Show all posts

Sunday, 1 August 2021

ಹೇಮಾವತೀ ತೀರ ನಿಲಯಾ ನಮೋ ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ankita vaikunta vittala


kruti by ಬೇಲೂರು ವೈಕುಂಠ ದಾಸರು belur vaikunta dasaru

 ಗೊರೂರು


ಹೇಮಾವತೀ ತೀರ ನಿಲಯಾ ನಮೋ

ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ


ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ

ದುರುಳ ಮಾನವರಿಟ್ಟೆಡೆಯಲಿರುವೆಂಬಾಗ

ತರುಣಿಯರೊಲವು ಪೈಸರಿಸುವಾಗ ಸುರರು ಮ

ತ್ಸರಿಪಾಗ ನರಸಿಂಹ ಶರಣೆನ್ನು ಮನವೇ 1


ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ

ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ

ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ

ಮೃಗರಾಜವದನ ಶರಣೆನ್ನು ಬಿಡದೆ ಮನವೇ 2


ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ

ಅಖಿಲ ಪಾತಕದ ನೆರೆಕಾಲಲೊದೆವಾಗ

ಮಖಮಥನ ಕಮಲಭವಮುಖ ದಿವಿಜವಂದ್ಯಪದ

ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] 3

***