by ಪ್ರಸನ್ನವೆಂಕಟದಾಸರು
ಕರತಾರೆ ಕರತಾರೆ ಶ್ರೀನಿವಾಸನಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.
ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆಸಿರಿರಾಣಿರಮಣ ಘನಾಂಗಗೆಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ 1
ಸುಂದರ ಸುಂದರ ಶುಭಮಂದಿರನ್ನ ದಯಾರಸಸುಂದರನ್ನ ವರಕಂಬುಕಂದರನ್ನಚೆಂದಾವರೆಗಣ್ಣವನಸಿಂಧೂರವರದನ್ನ ದೇವೇಂದ್ರಜಿತ ಪಾರಿಜಾತ ತಂದನ್ನ 2
ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರದಾಯಿತೀ ಅವಸ್ಥೆ ಹುಟ್ಟು ಹೊಂದಿಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟರಾಯ ಬಂದ ಫಲಿಸಿತಾನಂದ 3
********