Showing posts with label ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ hayavadana. Show all posts
Showing posts with label ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ hayavadana. Show all posts

Friday, 13 December 2019

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ ankita hayavadana

ದೀಪಾವಳಿಯ ನರಕ ಚತುದ೯ಶಿ ಶುಭದಿನದಂದು ಬ್ರಾಹ್ಮೀಮು ಹೂತ೯ದಲ್ಲೆದ್ದು ಕಾಮನ ಪಿತನನ್ನು ಸ್ಮರಿಸುತ್ತ ತೈಲಶಾಸ್ತ್ರ ಮಾಡುವುದು . 

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ IIಪII 

ಕಾತಿ೯ಕ ಮಾಸಗಳಲ್ಲಿ ಕಾಮನ ಪಿತನ ಪೂಜಿಸಲುI 
ಮಾಸಾಭಿಮಾನಿ ದಾಮೋದರನ ಭಜಿಸಿI 
ಲೇಸು ಸ೦ಪಿಗೆ ಗ೦ಧೆಣ್ಣೆ ಸಮಪಿ೯ಸಿI 
ಆ ಪುಣ್ಯ ಪುರುಷೋತ್ತಮನ ಕೊ೦ಡಾದುತI 
ತೈಲ ಶಾಸ್ತ್ರವ ರಚಿಸಿ II೧II 

ಪುಣ್ಯ ಸಾಧನದ ಜನರೆಲ್ಲ I ಬ್ರಾಹ್ಮೀಮೂಹೂತ೯ದ ಲೆದ್ದುII 
ಚೆನ್ನಾಗಿ ಗೋವುಗಳ ತುಳಸಿ ಪೂಜೆಯಮಾಡಿ I 
ಕಮ್ಮೆಣ್ಣೆ ಕಸ್ತೂರಿ ಕಪೂ೯ರ ವಿಳ್ಯವನಿತ್ತು I 
ಪನ್ನ೦ಗಶಯನನ ಪಾದಕೆ ಸಮಪಿ೯ಸಿ I 
ಗೋಪಿ - ಚಿನ್ನದಾರುತಿಯಬೆಳಗಿರೆ II೨II 

ಸೃಷ್ಟಿಗೆ ಕತೃ೯ ಶ್ರೀಹರಿಯI 
ಸೃಷ್ಟಿಸಿದನು ದೀಪಾವಳಿಯುI 
ಉತ್ತಮ ಚತುದು೯ಶಿ ದಿನದಲಿ ಬಂದುI 
ಮತ್ತೆ ನರಕಾಸುರನ ವಧಮಾಡಿ ಬಂದುI 
ಉತ್ತಮ ಧರೆಗಿಳಿದ ಕೃಷ್ಣಹಯವದನಗೆ 
ಮುತ್ತಿನಾರುತಿಯ ಬೇಳಗಿರೆ II೩II 
********