ankita janakiramana
ರಾಗ: ಶಂಕರಾಭರಣ ತಾಳ: ಆದಿ
ಮರೆಹೊಕ್ಕವರನು ನಿರುತದಿ ಸಲಹುವ
ಗುರುವರ ನಿಮಗೆ ನಮೋ ನಮೋ ಪ
ವರಮಂತ್ರಾಲಯಪುರದೊಳುನೆಲೆಸಿಹ
ಯತಿವರ ನಿಮಗೆ ನಮೋ ನಮೋ ಅ. ಪ
ತುಂಗಾ ತೀರದಿ ಶೋಭಿಪ ವರಮಂಗಳಾಂಗಗೆ ನಮೋ ನಮೋ
ಕೂಗಿ ಹರಿಯನು ಕಂಭದಿ ತೋರಿದ ಪ್ರಹ್ಲಾದರಿಗೆ ನಮೋ ನಮೋ 1
ಶರಣಾಗತರನುಪೊರೆವ ಬಿರದುಪೊತ್ತ ಯತಿವರ ನಿಮಗೆ ನಮೋ ನಮೋ
ಕರುಣಾರಸಪರಿಪೂರ್ಣ ಪರಮ ಶ್ರೀವ್ಯಾಸಮುನೀಂದ್ರಗೆ ನಮೋ ನಮೋ 2
ದೀನಭಕುತರ ಸುಮ್ಮಾನದಿ ಸಲಹುವ ಜ್ಞಾನಪೂರ್ಣನಿಗೆ ನಮೋ ನಮೋ
ಜಾನಕಿರಮಣನಪಾದಭೃಂಗ ಘನರಾಘವೇಂದ್ರಗೆ ನಮೋ ನಮೋ 3
***