Showing posts with label ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ tulasiramadasa. Show all posts
Showing posts with label ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ tulasiramadasa. Show all posts

Sunday, 5 September 2021

ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ankita tulasiramadasa

 ತುಳಸೀರಾಮದಾಸರು

ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪ

ಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1

ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2

ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3

ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4

***