ಮಾರುತೀ ಮತ್ಪ್ರಾಣೇಶ ಮಾರುತೀ ಪ
ಮಾರುತಿ ನಮಿಪೆ ನಾ ನಿನ್ನಾ ಭವಭಾರವನಿಳಿಸು ನೀ ಯೆನ್ನ |
ಗತಿ ತೋರು ಸದ್ಗುಣ ಸಂಪನ್ನಾ | ಬೇರೆ ಯಾರಿಲ್ಲ ಪೊರೆವರು
ಯನ್ನಾ | ನಿನ್ನೀ ಚಾರುಚರಿತೆಯ ಪಾಡಿ ಕೊಂಡಾಡುವೆ |
ಸೇರೆ ರಾಮನ ಪದವಾರಿಜ ತೋರಿಸು ಅ.ಪ
ತ್ರೇತೆಯೊಳಗೆ ಸಂಜನಿಸೀ ರಾಮದೂತಶೇಖರನೆಂದೆನಿಸೀ
ಹರಿಜಾತನ ವಚನವ ಸಲಿಸಿ
ಕಪಿ, ಖ್ಯಾತರೊಂದಿಗೆ ಸಂಚರಿಸಿ
ಸುರನೇತರುಘೇಯೆನ್ನೆ
ಶೀತಳ ಜಲಧಿಯ ಪ್ರೀತಿಯೊಳ್ದಾಟಿ
ಲಂಕಾ ಪತಿಯನು ಕಂಡೆ 1
ಪುರದಿ ಭೂಜಾತೆಯನರಸೀ ಕಾಣದರಿತು ವನವ, ತಲೆ
ಮರಸೀ ಕಂಡು ಮರುಗುತಾಕೆಯ
ದುಃಖ ವೆರೆಸೀ ಬಂದ
ದುರುಳ ರಾವಣನ ಪರಿಕಿಸಿ | ಆಹಾ | ಭರದಿ ಮುದ್ರಿಕೆಯಿತ್ತು |
ಪುರವನುರಿಸಿ | ರಘು | ವರನಡಿಗಳ
ಕಂಡ | ಧುರಧೀರರರಸನೇ 2
ಕಡಲತಡಿಯನೈದೀ ಭರದೀ | ಜಗ |
ದೊಡೆಯನಿಗೆಡೆಗುಡೆ ಶರಧೀ | ಲಂಕೆ
ಯೆಡೆಯೊಳ್ರಕ್ಕಸರ ಸಮರದಿ | ಕೊಲ್ಲುತಡುವ ಭೂತಗಳುಣ್ಣೆ
ಮುದದೀ | ಬಲು | ಘುಡಿ ಘುಡಿ
ಶಾರ್ಭಟಿಸುತ ಖಳ ಪಡೆಯನು
ಅಡಿಯೊಂದಿಗೊರೆಸಿ ರಾಘವನ ಮೆಚ್ಚಿಸಿದ 3
ದುರುಳರುದಿಸೆ ದ್ವಾಪರದಿ | ಪಾಂಡು |
ನರವರಗ್ಹ ಸ್ತಿನ ಪುರದೀ |
ಪುತ್ರ | ವರ ನೆನಿಸುವ ಸಂಭ್ರಮದೀ | ಯದು |
ವರನೊಡಗೂಡಿ ಕಾಳಗದೀ |
ಚಂದ | ಅರಿವೀರ ಭಟರ ಕಡಿದುರುಳಿಸಿ | ದುರುಳ ಕೌರವರ
ಬೇರೊರೆಸಿದ ಬಲಭೀಮ ||4
ಕಲಿಯುಗದೊಳು ವಿಪ್ರಕುಲದೀ |
ಪುಟ್ಟಿ | ಬಲಿದರ ಶಾಸ್ತ್ರ ಬಲದೀ |
ನಿಂದು| ಗೆಲಿದು ಸತ್ವವಗೊಂಡು ಛಲದಿ | ದ್ವೈತ ಕುಲವ
ಸ್ಥಾಪಿಸಿ ನೀ ನಲಿದೀ | ಭಲ | ಭಳಿರೆ ರಜತಪುರಿಯರಸನ
ನರ್ಚಿಸಿ | ಕಳೆಗೊಂಡ ಯತಿವರ |
ರಘುರಾಮವಿಠಲ ದೂತ 5
****