Showing posts with label ಐವರು ನಡೆವ purandara vittala ankita suladi ಪಾಂಡವ ಮಹಿಮಾ ಸುಳಾದಿ AIVARU NADEVA PANDAVA MAHIMA SULADI. Show all posts
Showing posts with label ಐವರು ನಡೆವ purandara vittala ankita suladi ಪಾಂಡವ ಮಹಿಮಾ ಸುಳಾದಿ AIVARU NADEVA PANDAVA MAHIMA SULADI. Show all posts

Monday, 26 April 2021

ಐವರು ನಡೆವ purandara vittala ankita suladi ಪಾಂಡವ ಮಹಿಮಾ ಸುಳಾದಿ AIVARU NADEVA PANDAVA MAHIMA SULADI


 Audio by Vidwan Sumukh Moudgalya


ಶ್ರೀ ಪುರಂದರದಾಸಾರ್ಯ ವಿರಚಿತ 


 ಹರಿಭಕ್ತರಾದ ಪಂಚಪ್ರಾಣರು.ಪಂಚಪಾಂಡವರ ಮಹಿಮಾ ಸುಳಾದಿ


 ರಾಗ : ಅಠಾಣ  


 ಧೃವತಾಳ


ಐವರು ನಡೆವ ಪಥ ರಾಜ ಪಥ

ಐವರು ನುಡಿದರೆ ವೇದಾರ್ಥ

ಐವರು ಮಿಂದುದೆ ಗಂಗೆತೀರ್ಥ

ಐವರು ಮಾಡಿದುದೆ ಮರ್ಯಾದೆ ನಾರಾಯಣ

ಐವರು ರಾಜಾಧಿರಾಜರುಗಳು ಕಾಣಿರೊ

ಐವರು ರಾಜ ಪರಮೇಶ್ವರರು ಕಾಣಿರೊ

ಐವರು ಗೋಷ್ಠಿಯಲ್ಲಿ ಪುರಂದರವಿಠಲಪ್ಪ ॥೧॥


 ಮಟ್ಟತಾಳ 


ಹಸ್ತಿನಪಟ್ಟನವ ನೇಗಿಲಿಲೆತ್ತಿದನೊಬ್ಬ

ಅಸ್ತಮಿಸಿ ದಿನ ಮಂಡಲ ಉದಯವಿತ್ತನೊಬ್ಬ

ಪೃಥ್ವಿಯ ಬಿಲ್ಲಿಂದ ಹರಹಿ ಇತ್ತವನೊಬ್ಬ

ಪೃಥ್ವಿಯಂ ಗೋವಿನಂತೆ ಕರೆದು ಕೊಟ್ಟವನೊಬ್ಬ

ವಸ್ತು ಪುರಂದರವಿಠಲನಿತ್ತ ಸಲಿಗೆಂತೊ

ಹಸ್ತಿನಪಟ್ಟನವ ನೇಗಿಲಿಲೆತ್ತಿದನೊಬ್ಬ ॥೨॥


 ತ್ರಿವಿಡಿತಾಳ 


ಐವತ್ತು ಸಾವಿರ ಯೋಜನವೆತ್ತ

ಲಂಕಾ ಪಟ್ಟಣವೆತ್ತ ಸಂಜೀವನವೆತ್ತ

ಇದನಿಲ್ಲಿಂದಲ್ಲಿಗೀಡಾಡುವುದೆತ್ತ

 ಪುರಂದರವಿಠಲನ ವರಪ್ರತಿಮರು ಕಾಣಿರೊ ॥೩॥


 ಅಟ್ಟತಾಳ 


ಸ್ವರ್ಗದ ಮುತ್ತಿಗೆಯನು ಬಿಡಿಸುವರು

ಮಾರ್ಗಣದಿಂದೆಚ್ಚೆತ್ತು ಪಾತಾಳದುದಕವ

ವಿಗ್ರಹ ಭೂಮಿಯಲ್ಲಿಟ್ಟು ಮೆರೆವರು

ಅಗ್ರಣಿ ಪುರಂದರವಿಠಲ ನಾಳುಗಳು

ಸ್ವರ್ಗದ ಮುತ್ತಿಗೆಯನು ಬಿಡಿಸುವರು ॥೪॥


 ಆದಿತಾಳ 


ಭಾಗೀರಥಿಯ ನೀಂಟಿದವರುಂಟೆ

ಸಾಗರವಾಪೋಶನ ಕೊಂಡವರುಂಟೆ

ನಾಗಾಭರಣವ ಮಾಡಿದವರುಂಟೆ

 ಪುರಂದರವಿಠಲನ ದಾಸರಲ್ಲದಲೆ ॥೫॥


 ಜತೆ


ಹರಿದಾಸರಿಗಿನ್ನು ಏನು ತೀರದಯ್ಯಾ

 ಪುರಂದರವಿಠಲನ ಕರುಣ ಓವಿಕಾವುತಲಿದೆ ॥೬॥

******