ಚೆಲ್ಲಿರೆಲ್ಲಾ ಮಲ್ಲಿಗೆಯಾ
ಶ್ರೀ ಲಕ್ಷ್ಮಿ ಚರಣದ ಮ್ಯಾಲೆ
||ಚೆಲ್ಲಿ||
ಸೌಭಾಗ್ಯ ಸಿರಿಯನ್ನು ಕೊಡುವಂತ ತಾಯಿಗೆ
ಗೊರವನಹಳ್ಳಿ ಆಲಯದಾಗೆ
||ಸೌಭಾಗ್ಯ||
ಅಭಿಷೇಕ ಮಾಡುವಾಗ
ಶುಭಪೂಜೆ ನಡೆಯುವಾಗ
||ಅಭಿಷೇಕ||
ಗೊರವನಳ್ಳಿ ದೇವಿಯ ಶುಭನಾಮ
ಪಾಡುತ್ತ ಚೆಲ್ಲಿರೆಲ್ಲಾಮಲ್ಲಿಗೆಯಾ
||ಗೊರವನಳ್ಳಿ||
ಶ್ರೀಹರಿಯ ಮಡದಿಗೆ
ಶ್ರೀ ಚಂದ್ರನ ಸೋದರಿಗೆ
ಮಡಿಉಟ್ಟು ಉಡಿತುಂಬಿ
ದೇವಿಯನ್ನು ಭಜಿಸುತ್ತ
ಚೆಲ್ಲಿರೆಲ್ಲ ಮಲ್ಲಿಗೆಯಾ
||ಶ್ರೀ ಚಂದ್ರನ||
ಕಮಲಮ್ಮ ಪೂಜಿಸುವಾ
ಮಹಾಲಕ್ಷ್ಮಿಯ ಸ್ಮರಿಸುತ್ತ
ಕಮಲದಲಿ ನೆಲೆಸಿ ಜಗ
ಸಲಹೋ ಮಾತಾಯ್ಗೆ
ಚೆಲ್ಲಿರೆಲ್ಲಾಮಲ್ಲಿಗೆಯಾ
||ಕಮಲಮ್ಮ||
ಫಲಪುಷ್ಪ ಸಲ್ಲಿಸುತ್ತ
ಪದ್ಮಪಾದ ಸ್ಮರಿಸುತ್ತ
ಅಷ್ಟ ಸಿದ್ದಿ ಕೊಡುವ
ಅಷ್ಟಲಕ್ಷ್ಮಿ ತಾಯಿಗೆ
ಚೆಲ್ಲಿರೆಲ್ಲಾ ಮಲ್ಲಿಗೆಯಾ
||ಫಲ||
ಹಸಿರುಗಾಜ ಬಳೆ ತಂದು
ಸಿಂಗಾರಿಗೆ ತೊಡಿಸುತ್ತ
ಮಂಗಳವ ಕರುಣಿಸುವ
ಮಂಗಳದ ಪಾದಕ್ಕೆ
ಚೆಲ್ಲಿರೆಲ್ಲಾ ಮಲ್ಲಿಗೆಯಾ
||ಹಸಿರು||
ಚೆಲ್ಲಿರೆಲ್ಲಾ ಮಲ್ಲಿಗೆಯಾ
ಶ್ರೀದೇವಿ ಚರಣದ ಮ್ಯಾಲೆ
ಮಂಗಳವ ಹಾಡುತ್ತ
ಆರತಿಯ ಬೆಳಗುತ್ತ
ಚೆಲ್ಲಿರೆಲ್ಲಾ ಮಲ್ಲಿಗೆಯಾ
********