Showing posts with label ಹರಿಹರಿ ಹರಿಹರಿಯಂದು ನೆನೆದವನೆ ಧನ್ಯ gurumahipati. Show all posts
Showing posts with label ಹರಿಹರಿ ಹರಿಹರಿಯಂದು ನೆನೆದವನೆ ಧನ್ಯ gurumahipati. Show all posts

Wednesday, 1 September 2021

ಹರಿಹರಿ ಹರಿಹರಿಯಂದು ನೆನೆದವನೆ ಧನ್ಯ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರಿ ಹರಿ ಹರಿ ಹರಿಯಂದು ನೆನೆದವನೆ ಧನ್ಯ | ಹರಿಯ ಮರದವನೇ ಮೂರು ಲೋಕದೋಳಾಮಾನ್ಯ ಪ 


ಹರಿಯ ಬಲಗೊಂಡಾ ಪ್ರಹ್ಲಾದಾ ಸುಖಿಯಾದಾ | ಹರಿಯ ಕೂಡ ಮರೆತು ಹಿರಣ್ಯಕನು ದುಃಖಿಯಾದಾ 1 

ಹರಿಶರಣನಾಗಿ ವಿಭೀಷಣನು ನೆಲೆಗೊಂಡಾ | ಹರಿಗೆ ಬಾಗದವೆ ದಶಾನನನು ಕಲುಷವುಂಡಾ 2 

ಹರಿಯ ನಂಬಿದ ಪಾಂಡವರು ಕೀರ್ತಿ ಧರಿಸಿದರು | ಹರಿಯನ್ನದೆ ವ್ಯರ್ಥ ಕೆಟ್ಟರು ನೋಡು ಕೌರವರು 3 

ಗುರು ಮಹಿಪತಿ ಸ್ವಾಮಿ ಭಕ್ತ ಸಹಕಾರಿ | ದುರುಳ ದುರ್ಮಾರ್ಗದಲಿ ನಡೆದ ದುಷ್ಟ ಜನವಿದಾರಿ 4

***