..
ಶ್ರೀಶನ ಭೇರಿ ನಾದಗಳಿಂದ ಬೃಹಸ್ಪತಿ ಬಂದ ಪ.
ಮಿತ್ರೆಯರು ಬೃಹಸ್ಪತಿಗೆ ಮುತ್ತಿನ ಗದ್ದಿಗೆಯನಿಟ್ಟುಅರ್ಥಿಲೆ ಚರಣಕ್ಕೆರಗಿದರುಅರ್ಥಿಲೆ ಚರಣಕ್ಕೆರಗಿದರು ಬೃಹಸ್ಪತಿಉತ್ತಮ ತಿಥಿಯು ಬರಬೇಕು1
ಜಾಣೆಯರು ಬೃಹಸ್ಪತಿಗೆ ಮಾಣಿಕದಕ್ಷತೆನಿಟ್ಟುಅಣಿ ಮುತ್ತಿಟ್ಟು ಮೊರ ತುಂಬಿಅಣಿ ಮುತ್ತಿಟ್ಟು ಮೊರತುಂಬಿ ಸುಭದ್ರಆಣಿಯ ಬಿಡಿಸೋ ತಿಥಿ ಬೇಕು2
ಎಲ್ಲ ನಾರಿಯರಿಗೆ ಬಲ್ಲಿದತಿಥಿಬೇಕು ಚಲ್ವ ರಾಮೇಶ ನುಡಿದನು ಚಲ್ವ ರಾಮೇಶÀ ನುಡಿದನು ಬೃಹಸ್ಪತಿ ನಿಲ್ಲದೆ ತೆಗೆದ ಶುಭ ತಿಥಿಯ3
****