Showing posts with label ಗೋಪಾಲ ವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ gopala vittala. Show all posts
Showing posts with label ಗೋಪಾಲ ವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ gopala vittala. Show all posts

Wednesday, 1 September 2021

ಗೋಪಾಲ ವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ankita gopala vittala

..

ಗೋಪಾಲವಿಠಲ ನೀ ಕಾಪಾಡೊ ಎನ್ನನುಅಪಾರ ಜನುಮದಿ ಪೊಂದಿ ಇಪ್ಪೆ ನಿನ್ನ ಪ.

ಉದಿತ ತರಣೀನಿಭ ಪದಪದ್ಮ ನಿನ್ನಯಹೃದಯದೊಳಗಿರಿಸಿ ಮುದದಿಂದ ಧ್ಯಾನಿಪಸದಯುಗಳ ಪಾದಪದುಮಸೇವೆಯನುಒದಗಿ ಪಾಲಿಸೊ ಶಶಿವದನ ಸಂ(ಕಂ)ಸದನನೆ 1

ವಾಸುದೇವನೆ ಎನ್ನ ದೋಷಿಯೆಂತೆಂದರೆಆಸರಿನ್ನ್ಯಾರು ನಿನ್ನ ದಾಸರದಾಸಗೆದಾಸವಿನುತ ಹೀಗುದಾಸೀನ ಮಾಡಲುದಾಸಜನರು ನಿನ್ನ ಲೇಶವು ಮೆಚ್ಚರು 2

ಪಿರಿಯರೆಲ್ಲರು ನಿನ್ನ ಚರಣವ ಪೂಜಿಸಿಪರಮಾನುಗ್ರಹ ಪರಿಪಾಲಿಸಿಪ್ಪರೆನ್ನನಿರುತದಿಬೇಡುವೆ ಗೋಪಾಲವಿಠಲ ಶ್ರೀಲೋಲನೆದೊರೆಯೆ ನಿನ್ನ ಮೂರುತಿ ಬರವೆನ್ನ ಮನಸಿಗೆ 3

***