ಇಂಥ ಮದಕದ ಬಾಲೆಯನಾಳುವರೆಂಥ ಧನ್ಯರೆ
ಆಗಿನ್ನೆಂಥ ಕವತುಕ ಕಂಡೆ ಅಮ್ಮಿನ ಎಂಥ ಅಂಜಿದೆವೆ ಪ.
ಉತ್ತಮಳು ದ್ರೌಪತಿ ಎಂದು
ಮತ್ತೆ ಎರಗಲು ಹೋದೆನಮ್ಮ
ಹತ್ತು ಪಾದ ಕಂಡು
ಕಣ್ಣು ಕತ್ತಲೆ ಹೊಯ್ದಾವೆ ಅಮ್ಮಿನ 1
ಪಂಚಭಕ್ಷ ಪರಮಾನ್ನವನು
ಪಾಂಚಾಲಿ ಉಣಬಡಿಸಿದಳೆನಗೆ
ಪಂಚ ಹಸ್ತ ಕಂಡು
ಮನದಲೆ ಚಂಚಲಗೈಯ್ದೆನೆ 2
ಅತ್ಯಂತ ಪ್ರೇಮದಲಿ ದ್ರೌಪತಿ
ವಸ್ತ್ರವೀಳ್ಯ ಕೊಟ್ಟಾಳೆನಗೆ
ಹತ್ತು ಹಸ್ತ ಕಂಡು
ಮೈಯ ಮರೆತೆನೆ ನಾನು 3
ಬಾರಿ ಬಾರಿಗೆ ಬೆದರಿಬೆಚ್ಚಿ
ನಾರಿಯ ನೋಡಿದೆನೆ ನಾನು
ಸೂರ್ಯನಂತೆ ಹೊಳೆವೊ
ಐದುಮಾರಿ ಕಂಡೆನೆ4
ಕೀರುತಿವಂತÀಳ ಮುಂದೆ
ವಾರ್ತೆಯ ಹೇಳುತಲಿದ್ದೆ
ಮಾರುತನ ರಾಣಿ
ಭಾರತಿಯು ಆದಳೆ ಅಮ್ಮಿನ್ 5
ಶುಚಿರ್ಭೂತ ಗೌರಿಯ ಕಂಡು
ವಚನ ಪೇಳುತ ನಿಂತೆನಮ್ಮ
ರುಚಿರರೂಪ ಅಡಗಿ ಆಗ
ಶಚಿಯು ಆದಳೆ ಆಮ್ಮಿನ್ 6
ಇಂದ್ರನರಸಿ ಅಡಗಿ ಶ್ಯಾಮಲೆ
ಬಂದು ನಿಂತಾಳಮ್ಮ ಕ್ಷಣದಿ
ಎಂದೂ ಕಾಣದ ಸೋಜಿಗ
ಒಂದೊಂದು ಕಂಡೆನೆ ಅಮ್ಮಿನ್7
ನಿಂತ ಶ್ಯಾಮಲೆ ಅಡಗಿ ಉಷೆಯು
ಎಂಥ ಬೆಳಕನೆ ತೋರಿಸಿದಳಮ್ಮ
ಇಂಥ ಬೆಡಗು ರಾಮೇಶನ
ಕಾಂತೆ ಕೇಳಮ್ಮ ಅಮ್ಮಿನ್8
****