Showing posts with label ಆವ ಧನ್ಯರೋ ಸುಖಿಸುವರು ಗೋಕುಲದವರು ಗೋವಿಂದನೊಳು mahipati. Show all posts
Showing posts with label ಆವ ಧನ್ಯರೋ ಸುಖಿಸುವರು ಗೋಕುಲದವರು ಗೋವಿಂದನೊಳು mahipati. Show all posts

Wednesday, 1 September 2021

ಆವ ಧನ್ಯರೋ ಸುಖಿಸುವರು ಗೋಕುಲದವರು ಗೋವಿಂದನೊಳು ankita mahipati

ಕೃತಿ ಕಾಖಂಡಕಿ ಶ್ರೀ ಮಹಿಪತಿರಾಯರು

ಆವಧನ್ಯರೋ ಸುಖಿಸುವರು ಗೋಕುಲದವರು | ಗೋವಿಂದನೊಳು ಕ್ರೀಡಿಸುವರು ಗೋಗೋವಳರು P

 ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ | ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ | ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ | ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ 1

 ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ | ಕರದಿನವೀನ ತೃಣವಾ ಕಡಿದು ಕವಳವಿಡಿದು | ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು | ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು 2 

ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ | ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ | ಅನುವಾಗಿದೋವರ್ತನಕಳಿಯಾ ವರ ಬಳಿಯಾ | ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ 3

***