Showing posts with label ಒಂದೇ ಮನದಲಿ ಭಜಿಸು ವಾಗ್ದೇವಿಯ purandara vittala ONDE MANADALI BHAJISU VAAGDEVIYA. Show all posts
Showing posts with label ಒಂದೇ ಮನದಲಿ ಭಜಿಸು ವಾಗ್ದೇವಿಯ purandara vittala ONDE MANADALI BHAJISU VAAGDEVIYA. Show all posts

Tuesday, 3 December 2019

ಒಂದೇ ಮನದಲಿ ಭಜಿಸು ವಾಗ್ದೇವಿಯ purandara vittala ONDE MANADALI BHAJISU VAAGDEVIYA


2nd Audio by Mrs. Nandini Sripad

ಶ್ರೀ ಪುರಂದರದಾಸರ ಕೃತಿ 

 ರಾಗ ತೋಡಿ           ಮಿಶ್ರಛಾಪುತಾಳ 

ಒಂದೇ ಮನದಲಿ ಭಜಿಸು ವಾಗ್ದೇವಿಯಾ ॥ ಪ ॥
ಇಂದುಮತಿ ಕೊಡುವಳು ಶ್ರೀಹರಿಯ ಧ್ಯಾನದೊಳು ॥ ಅ ಪ ॥

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ।
ಬಂದು ಆರಂಭಿಸಲು ಹರಿ ವಿಶ್ವಮಯನೆಂದು ॥
ಬಂದ ವಿಘ್ನವ ಕಳೆದು ಭಾವಶುದ್ಧಿಯನಿತ್ತು ।
ಹೊಂದಿಸಿದಳಾ ಶ್ರೀಹರಿಯ ಚರಣವನು ॥ 1 ॥

ಅಂದು ದಶಮುಖನನುಜನು ವಂದಿಸದೆ ವಾಣಿಯನು ।
ಬಂದು ತಪವನುಗೈಯೆ ಬಹುಕಾಲಕೆ ॥
ಅಂದದಿಂ ಅಜ ಮೆಚ್ಚಿ ವರವಧಿಕ ಬೇಡೆನಲು ।
ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ॥ 2 ॥

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ ।
ಉರುತರವಾದ ವಾಕ್ಬುದ್ಧಿಯನಿತ್ತು ॥
ನಿರುತ ಶ್ರೀಪುರಂದರವಿಠಲನ ಸೇವೆಯೊಳು ।
ಪರತತ್ವದ ಕಥಾಮೃತವನುಣಿಸುವಳು ॥ 3 ॥
***


Onde manadali bhajisu vagdeviya ||pa||

Indu mati koduvalu shrihariya dhyanadali ||a pa||

Hinde prahladanu kamalajana satigeragi nindu
Aradhisalu harivishvamayanendu |
Bandu vignava kaledu bhavashuddhiyannittu |
Hondisidalaga shrihariya charanadalli ||1||

Andu dashamukananuja vandisadhe vaniyanu |
Bandu tapavanu gaiye bahukalake |
Andadindagamecchi varavadhika bedenalu |
Nindu jihveyali nidreya bedisidalu ||2||

Aritu bhajisalu bidade ajanarasiya nitya
Urutara vak shuddhiyannittu |
Niruta shripurandaravithalana seveyolu |
Paratattvavada kathamrutavanunisuvalu ||3||
***


ರಾಗ ಯದುಕುಲಕಾಂಭೋಜ ಝಂಪೆತಾಳ

ಒಂದೇ ಮನದಿ ಭಜಿಸು ವಾಗ್ದೇವಿಯ ||ಪ ||
ಇಂದುಮತಿ ಕೊಡುವಳು ಹರಿಯ ಧ್ಯಾನದಲಿ ||ಅ ||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ
ನಿಂದು ಆರಾಧಿಸಲು ಹರಿ ವಿಶ್ವ(ಮಯ)ನೆಂದು
ಬಂದ ವಿಘ್ನವ ಕಳೆದು ಭಾವ ಶುದ್ಧಿಯನಿತ್ತು
ಪೊಂದಿಸಿದಳಾಗ ಶ್ರೀ ಹರಿಯ ಚರಣದಲಿ ||

ಅಂದು ದಶಮುಖನನುಜ ವಂದಿಸದೆ ವಾಣಿಯನು
ನಿಂದು ತಪವನು ಗೆಯ್ಯೆ ಬಹುಕಾಲವು
ಅಂದದಿಂದಜ ಮೆಚ್ಚಿ ವರವಧಿಕ ಬೇಡೆನಲು
ನಿಂದು ಜಿಹ್ವೆಯಲಿ ನಿದ್ರೆಯ ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ
ಉರುತರವಾದ ವಾಕ್ಶುದ್ಧಿಯನಿತ್ತು
ತ್ವರಿತದಿ ಪುರಂದರವಿಠಲನ ಸೇವೆಯೊಳಿರಿಸಿ
ಪರತತ್ವವಾದ ಕಥಾಮೃತವ ನುಡಿಸುವಳು ||
***********

ಒಂದೇ ಮನದಲಿ ಭಜಿಸು ವಾಗ್ದೇವಿಯ |
ಇಂದುಮತಿಕೊಡುವಳು ಶ್ರೀಹರಿಯ ಧ್ಯಾನದೊಳು||

ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |ಬಂದು ಆರಂಭಿಸಲುಹರಿವಿಶ್ವಮಯನೆಂದು ||
ಬಂದವಿಪ್ಲವಕಳೆದು ಭಾವಶುದ್ಧಿಯನಿತ್ತು |ಹೊಂದಿಸಿದಳು ಶ್ರೀ ಹರಿಯ ಚರಣವನು ||

ಅಂದು ದಶಮುಖನನುಜ ವಂದಿಸದೆ ವಾಣಿಯನು |ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು ||

ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀಪುರಂದರವಿಠಲನ ಸೇವೆಯೊಳು |ಪರತತ್ತ್ವದ ಕಥಾಮೃತವನುಣಿಸಿದಳು ||
*******