Showing posts with label ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ govinda. Show all posts
Showing posts with label ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ govinda. Show all posts

Monday, 18 November 2019

ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ankita govinda

by ಗೋವಿಂದದಾಸ
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿ ಪ

ಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪ

ಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1

ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2

ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3

ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4

ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5

ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6

ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
********