check sripadaraya
ಪುರಂದರದಾಸರು
ಸುಮ್ಮನೆ ವೈಷ್ಣವನೆಂದಿರಿ ಪರ |ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.
ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1
ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2
ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
***

pallavi
summane vaiSNavanembiri para bomma su-jnAnavariyada manujaranu
caraNam 1
mukhava toLedu nAmavaniTTudallade prakaTa shAstrava nAnu nODidene
mukha shrngArake mAle hAkidenallade bhakuti rasadalli muLugidene
caraNam 2
Uru mAtugaLa nAnADidenallade nArAyaNa krSNa sharaNendane
nAriyarige mecci maruLAdenallade guru hiriyarige nA namisidenEnayya
caraNam 3
jagatu satyavemba pancabhEdava tiLidu rAgadvESagaLembudanu varjisi
bhagavantanali shravaNa sankIrtaneyinda nigama gOcaranendu tiLidenEnayya
caraNam 4
nararAtumadindadhika gandarvadindadhika surapanindadhika bhavagadhika
sarasvatigadhika virinci sirigadhika hari sarvOttamanendu tiLidenEnayya
caraNam 5
gangeyali mai maNNa toLede nAnallade hingade snAnava mADidene
ranga purandara viTTalana dAsara sangava biDade nAniddenEnayya
***